ವಿದ್ಯಾರ್ಥಿಗಳಿಗೆ ಪರೀಕ್ಷೆ, ರಾಜ್ಯಪಾಲರ ಭೇಟಿ ಹಿನ್ನೆಲೆ: ಅ.3 ರಂದು ಉಡುಪಿ ಬಂದ್ ಬೇಡ; ಕೋಟ ಶ್ರೀನಿವಾಸ ಪೂಜಾರಿ

Views: 0
ರಾಜ್ಯಪಾಲರು ಅ. 3ರಂದು ಜಿಲ್ಲೆಗೆ ಆಗಮಿಸುವ ಹಿನ್ನೆಲೆಯಲ್ಲಿ ಬಂದ್ ಇರುವುದಿಲ್ಲ. ಅದೇ ದಿನ ಪಾದಯಾತ್ರೆ ಮಾಡುವ ಚಿಂತನೆ ಇತ್ತಾದರೂ ಅನುಮತಿ ದೊರಕದ ಕಾರಣ ಅ. 4ರಂದು ಪಾದಯಾತ್ರೆ ನಡೆಯಲಿದೆ.
ಜಿಲ್ಲಾ ಬಂದ್ ಕರೆಯನ್ನು ಲಾರಿ ಟೆಂಪೋ ಮಾಲಕರು ವಾಪಸ್ ಪಡೆಯಬೇಕು:ಕೋಟ ಶ್ರೀನಿವಾಸ ಪೂಜಾರಿ
ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಕರೆಯುವ ಆಶ್ವಾಸನೆ ನೀಡಿರುವುದರಿಂದ ಮತ್ತು ಶಾಲಾ ಮಕ್ಕಳ ಪರೀಕ್ಷೆ ನಡೆಯುತ್ತಿರುವುದರಿಂದ ಜಿಲ್ಲಾ ಬಂದ್ ಕರೆಯನ್ನು ಲಾರಿ ಟೆಂಪೋ ಮಾಲಕರು ವಾಪಸ್ ಪಡೆಯಬೇಕು ಎಂದು ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಟನಕಾರರಿಗೆ ಮನವಿ ಮಾಡಿದ್ದಾರೆ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಿಎಂ ಅವರೊಂದಿಗೆ ಚರ್ಚಿಸಿ ಅ. 5ರಂದು ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸರಕಾರದ ಜತೆ ಚರ್ಚಿಸಿ ಹೋರಾಟಗಾರರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಿದ್ದೇವೆ. ರವಿವಾರ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾಗಿದ್ದು, ಅವರ ಸಮಕ್ಷಮ ಸಭೆ ಕರೆಯಲು ಕೋರಿದಾಗ ಶೀಘ್ರದಲ್ಲಿ ಜಿಲ್ಲಾ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂಧಾನ ವಿಪಲ :ಮುಷ್ಕರದಿಂದ ಹಿಂದೆ ಸರಿಯುವ ಮಾತಿಲ್ಲ
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಕಟ್ಟಡ ಸಾಮಗ್ರಿ ಲಾರಿ ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ಹೆದ್ದಾರಿ ಬದಿ ವಾಹನ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದು, ರವಿವಾರ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳೊಂದಿಗೆ 1 ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು.
ಸುದೀರ್ಘ ಚರ್ಚೆಯ ಬಳಿಕವೂ ಮುಷ್ಕರ ಹಿಂಪಡೆಯುವಂತೆ ಮನವೊಲಿಸುವಲ್ಲಿ ಸಂಧಾನ ಸಭೆ ವಿಫಲವಾಯಿತು.
ತಮ್ಮ ವಾಹನಗಳಿಗೆ ಜಿಪಿಎಸ್ ಅಳವಡಿ ಸುವುದಕ್ಕೆ ಸಿದ್ಧವಿದ್ದರೂ ಗಣಿ ಇಲಾಖೆಯ ತಪ್ಪು ಮಾಹಿತಿ, ಅನಧಿಕೃತ ಕೋರೆಗಳು, ಬೇಡಿಕೆಯಷ್ಟು ಲಭ್ಯವಿಲ್ಲದ ಮರಳು, ಜಲ್ಲಿ, ಸೈಜ್ ಕಲ್ಲು ಈ ಎಲ್ಲ ಸಮಸ್ಯೆಗೆ ಸೂಕ್ತ ಪರಿಹಾರ ಸಿಗದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಷ್ಕರದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ವಾಹನ ಮಾಲಕರು ಸಭೆಗೆ ತಿಳಿಸಿ ತೆರಳಿದರು.