ಜನಮನ

ನಾಳೆ ಬೆಂಗಳೂರು ಬಂದ್ ಆಗುತ್ತಾ, ಇಲ್ವಾ? ಗೊಂದಲಕ್ಕೆ ಇಲ್ಲಿದೆ ಉತ್ತರ

Views: 0

ನಾಳೆ ಬೆಂಗಳೂರು ಬಂದ್ ಗೆ ಹಲವು ಸಂಘಟನೆಗಳು ಕರೆ ನೀಡಿವೆ. ಆದರೆ ಇನ್ನೂ ಅನೇಕ ಸಂಘಟನೆಗಳು ಶುಕ್ರವಾರ, ಅಂದರೆ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಮಾಡಲು ಸಜ್ಜಾಗಿವೆ.

ತೀವ್ರ ಬರಗಾಲ ಎದುರಿಸುತ್ತಿರುವ ಕರ್ನಾಟಕ್ಕೆ ಕಾವೇರಿ ಬರೆ ಬಿದ್ದಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯಾದ್ಯಂತ ಆಕ್ರೋಶದ ಕಿಚ್ಚು ಭುಗಿಲೆದ್ದಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ನಾಳೆ ಬೆಂಗಳೂರು ಬಂದ್‌ಗೆ ಹಲವು ಸಂಘಟನೆಗಳು ಕರೆ ನೀಡಿವೆ. ಆದರೆ ಇನ್ನೂ ಅನೇಕ ಸಂಘಟನೆಗಳು ಶುಕ್ರವಾರ, ಅಂದರೆ ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಮಾಡಲು ಸಜ್ಜಾಗಿವೆ. ಹೀಗಾಗಿ ನಾಳಿನ ಬೆಂಗಳೂರು ಬಂದ್ ನಡೆಯುತ್ತೋ, ನಡೆಯಲ್ವೋ ಎಂಬ ಗೊಂದಲ ಇದೀಗ ಸಹಜವಾಗಿ ಬೆಂಗಳೂರಿಗರ ಮನಸಲ್ಲಿ ಮೂಡುತ್ತದೆ.

ನಾಳೆ ಬೆಂಗಳೂರು ಬಂದ್ ಆಗುತ್ತಾ?

ನಾಳೆ ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ ಆಗುತ್ತಾ? ಅಥವಾ ಪ್ರತಿಭಟನೆಗೆ ಸೀಮಿತವಾಗುತ್ತಾ? ಎಂಬ ಪ್ರಶ್ನೆ ಇದೀಗ ಎದ್ದಿದೆ. ನಾಳೆ ಬೆಂಗಳೂರು ಬಂದ್‌ಗೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿಲ್ಲ. ಅದರ ಬದಲು ಸೆ. 29, ಅಂದರೆ ಶುಕ್ರವಾರದ ಬಂದ್‌ಗೆ ಕರ್ನಾಟಕ ಬಂದ್‌ಗೆ ಬಹುತೇಕ ಸಂಘಟನೆಗಳು ಒಲವು ತೋರಿವೆ.

ಸ್ವಪ್ರತಿಷ್ಟಿಗೆ ಬಡವಾಯ್ತಾ ಬಂದ್ ಹೋರಾಟ?

ವಾಟಾಳ್ ನಾಗರಾಜ್ vs ಕುರುಬೂರು ಶಾಂತಕುಮಾರ್ ಪ್ರತಿಷ್ಠೆಗೆ ಬಂದ್‌ ಬಡವಾಯ್ತಾ ಎಂಬ ಸಂಶಯ ಇದೀಗ ಕಾಡುತ್ತಿದೆ. ಕುರುಬೂರು ಶಾಂತಕುಮಾರ್ ಬಣದಿಂದ ನಾಳೆ ಪ್ರತಿಭಟನೆಗೆ ಮಾತ್ರ ಬಂದ್ ಸೀಮಿತವಾಗುವ ಸಾಧ್ಯತೆ ಇದೆ.

ಇನ್ನು ನಾಳೆ ಅಂದರೆ ಸೆ. 26 ಬೆಂಗಳೂರು ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದವರು, ಇದೀಗ ಬಂದ್ ವಾಪಾಸ್ ಪಡೆದಿದ್ದಾರೆ. ಇದರ ಬದಲು ಸೆ. 29ರಂದು ಕರ್ನಾಟಕ ಬಂದ್ ಗೆ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.

ನಾಳೆ ಯಾವ್ಯಾವ ಸಂಘಟನೆಗಳಿಂದ ಬೆಂಬಲ?

ನಾಳಿನ ಬೆಂಗಳೂರು ಬಂದ್‌ಗೆ ಹಲವು ಸಂಘಟನೆಗಳು ಈಗಾಗಲೇ ಬೆಂಬಲ ಘೋಷಿಸಿವೆ. ಕಬ್ಬು ಬೆಳೆಗಾರ ಸಂಘ, ಆಮ್ ಆದ್ಮಿ ಪಾರ್ಟಿ, ಪೋಷಕರ ಸಮನ್ವಯ ಸಮಿತಿ, ಪೀಸ್ ಆಟೋ ಸಮಿತಿ, ಜಯ ಕರ್ನಾಟಕ ಸಂಘಟನೆ, ನಾರಾಯಣಸ್ವಾಮಿ ಆಟೋ ಸಂಘಟನೆ, ಬಿಎಂಟಿಸಿ ಸಾರಿಗೆ ಸಿಬ್ಬಂದಿ ಫೆಡರೇಷನ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.

ನಾಳೆ‌ ಬಂದ್ ಹಿಂಪಡೆದವರು ಯಾರು?

ನಾಳಿನ ಬಂದ್‌ಗೆ ಹೋಟೆಲ್ ಮಾಲಿಕರ ಸಂಘ, ಓಲಾ – ಊಬರ್ ಚಾಲಕರ ಸಂಘಟನೆ, ಆದರ್ಶ ಆಟೋ ಚಾಲಕರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ವಾಪಸ್ ಪಡೆದಿವೆ.

ತಟಸ್ಥರಾಗಿರೋರು ಯಾರು?

ಇನ್ನು ಕೆಲವು ಸಂಘಟನೆಗಳು ತಟಸ್ಥವಾಗಿದ್ದು, ನೈತಿಕ ಬೆಂಬಲ ಘೋಷಿಸಿವೆ. ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆ, ಕುಸುಮಾ ಖಾಸಗಿ ಶಾಲಾ ಸಂಘ, ರುಪ್ಸಾ ಖಾಸಗಿ ಸಂಘಟನೆ, ಬೀದಿ ಬದಿ ವ್ಯಾಪಾರಿಗಳ ಸಂಘಟನೆ ತಟಸ್ಥವಾಗಿ ಇರಲಿವೆ.

ಸೆ.29 ಕರ್ನಾಟಕ‌ ಬಂದ್ ಬೆಂಬಲಿಸೋರ್ಯಾರು?

ಇನ್ನು ಕರವೇ ಪ್ರವೀಣ ಶೆಟ್ಟಿ ಬಣ, ಶಿವರಾಮೇಗೌಡ ಬಣ, ಕೆ ಆರ್ ಕುಮಾರ್ ಬಣ, ಕನ್ನಡ‌ ಚಲನಚಿತ್ರ‌ವಾಣಿಜ್ಯ ಮಂಡಳಿ ಸೇರಿದಂತೆ ಪ್ರಮುಖ ಸಂಘಟನೆಗಳು ಸೆಪ್ಟೆಂಬರ್ 29ರ ಬಂದ್‌ಗೆ ಬೆಂಬಲ ಸೂಚಿಸಿವೆ.

ನಾಳೆ ಬಿಎಂಟಿಸಿ ಬಸ್ ಓಡಾಡುತ್ತಾ?

ನಾಳಿನ ಬಂದ್‌ಗೆ ಬಿಎಂಟಿಸಿ ಬೆಂಬಲ ಘೋಷಿಸಿದೆ. ನಾವು ನಾಳಿನ ಬಂದ್‌ಗೆ ಬೆಂಬಲ ವಾಪಾಸ್ ಪಡೆಯಲ್ಲ, ನಾಳೆ ನಮ್ಮ ಸಿಬ್ಬಂದಿ ಬಸ್ ಘಟಕದಿಂದ ಹೊರತೆಗೆಯುವುದಿಲ್ಲ ಅಂತ ಬಿಎಂಟಿಸಿ ಸಾರಿಗೆ ಸಿಬ್ಬಂದಿ ಫೆಡರೇಷನ್ ಹೇಳಿದೆ.

ಇನ್ನು ಕೆಎಸ್‌ಆರ್‌ಟಿಸಿ ಎಂದಿನಂತೆ ಸಂಚಾರ ನಡೆಸಲಿದೆ ಅಂತ ಅನಂತ ಸುಬ್ಬರಾವ್ ಹೇಳಿದ್ದಾರೆ. ಬೆಂಗಳೂರು ಹೊರವಲಯ, ಅಗತ್ಯ ಬಿದ್ದರೆ ನಗರದೊಳಗೆ ಸಂಚಾರ ನಡೆಸಲಿದೆ ಅಂತ ಅನಂತ ಸುಬ್ಬರಾವ್ ಮಾಹಿತಿ ನೀಡಿದ್ದಾರೆ.

Related Articles

Back to top button
error: Content is protected !!