ಜನಮನ

ಉಡುಪಿಯಲ್ಲಿ 2ನೇ ಕೈಮಗ್ಗದ ನೇಯ್ಗೆ ತರಬೇತಿ ಕಾರ್ಯಾಗಾರ ಶೀಘ್ರದಲ್ಲಿ ಆರಂಭ

Views: 5

 

ಉಡುಪಿ: ಭೌಗೋಳಿಕ ಮಾನ್ಯತೆ ಪಡೆದಿರುವ ಕೈಮಗ್ಗದ ಉಡುಪಿ ಸೀರೆ’ ಗಳ ಪುನಶ್ಚೇತನದ ಅಂಗವಾಗಿ 30 ಆಸಕ್ತರಿಗಾಗಿ ಆರು ತಿಂಗಳ ಕೈಮಗ್ಗದ ನೇಯ್ಗೆ ತರಬೇತಿ ಕಾರ್ಯಾಗಾರ ಉಡುಪಿಯಲ್ಲಿ ಅಕ್ಟೋಬರ್ ನಲ್ಲಿ ಆರಂಭಗೊಳ್ಳಲಿದೆ.

1) ಆಸಕ್ತರು ಅಕ್ಟೋಬರ್ 1ನೇ ತಾರೀಖಿಗೆ ಮುಂಚಿತವಾಗಿ ತಮ್ಮ ಹೆಸರನ್ನು ಕರೆ ಅಥವಾ ವಾಟ್ಸ್ ಆಪ್ ಮಾಡಿ ನೋಂದಾಯಿಸಿಕೊಳ್ಳಬೇಕಾಗಿದೆ.

2) ಮಹಿಳೆಯರು ಹಾಗೂ ಕೈಮಗ್ಗದ ನೇಕಾರಿಕೆಯ ಹಿನ್ನೆಲೆ ಹೊಂದಿರುವವರಿಗೆ ಆದ್ಯತೆ.

3) ಶಿಬಿರಾರ್ಥಿಗಳಿಗೆ ಐದು ತಿಂಗಳು

ಮಾಸಿಕ ತಲಾ ರೂ. 8,000/- ತರಬೇತಿ ವೇತನ ನೀಡಲಾಗುವುದು.

4) ಬೆಳಿಗ್ಗೆ ಮತ್ತು ಸಂಜೆ ಲಘು ಪಾನೀಯ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಇರುವುದು.

5) ಆರು ತಿಂಗಳ ತರಬೇತಿಯ ಬಳಿಕ ನಾವು ಮಾಡಿಕೊಡುವ ವ್ಯವಸ್ಥೆಗಳನ್ನು ಬಳಸಿಕೊಂಡು, ಕಡ್ಡಾಯವಾಗಿ ಸ್ವಂತ ಕೈಮಗ್ಗದ ನೇಕಾರಿಕೆ ಆರಂಭಿಸಬೇಕು.

ಈ ತರಬೇತಿ ಕಾರ್ಯಾಗಾರವು ಉಡುಪಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ, ನಬಾರ್ಡ್, ರೋಬೋ ಸೋಪ್ಟ್ ನ ಸಿ.ಎಸ್.ಆರ್ ಯೋಜನೆ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇವರ ಸಹಭಾಗಿತ್ವದಲ್ಲಿ ಜರುಗಲಿದೆ.

ಕಾರ್ಯಕ್ರಮ ಸಂಯೋಜಕರು,ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ (ರಿ) ಇದರ ಅಧ್ಯಕ್ಷರಾದ  ರತ್ನಾಕರ ಇಂದ್ರಾಳಿ, ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ವಿವರಗಳಿಗೆ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಿ: ರತ್ನಾಕರ ಇಂದ್ರಾಳಿ ಮೊಬೈಲ್: 9844993565

Related Articles

Back to top button
error: Content is protected !!