ಜನಮನ
ತೊಂಬಟ್ಟು ನಿಗೂಢವಾಗಿ ನಾಪತ್ತೆಯಾದ ಯುವಕ: ಸ್ಥಳೀಯರಲ್ಲಿ ಆತಂಕ!

Views: 0
ನಿಗೂಢವಾಗಿಯೇ ಉಳಿದ ಯುವಕ ನಾಪತ್ತೆ ಪ್ರಕರಣದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ವಿವೇಕಾನಂದ (28) ಅವರು ಮನೆಯಿಂದ ನಾಪತ್ತೆಯಾಗಿ 6 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಅವರು ಸೆ.16ರಂದು ಮನೆಯಿಂದ ನಾಪತ್ತೆಯಾಗಿದ್ದರು.
ನಾಪತ್ತೆಯ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರೊಂದಿಗೆ ಅಮಾಸೆಬೈಲು ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬಂದಿ ಕೂಡ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ತೊಂಬಟ್ಟು ಪರಿಸರದ ಅರಣ್ಯದಲ್ಲಿ ಸಾಕಷ್ಟು ಚಿರತೆಗಳು ಓಡಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದು, ಇದು ಆತಂಕ ಸೃಷ್ಟಿಸಿದೆ.
ಕಂದಾಯ ಇಲಾಖೆಯ ಯಾವ ಅಧಿಕಾರಿಗಳು ಕೂಡ ನಾಪತ್ತೆಯಾದ ಯುವಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯ ಮಾಡಿಲ್ಲ ಎಂದು ಸ್ಥಳೀಯರು ಕಂದಾಯ ಇಲಾಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.






