ಸಾಂಸ್ಕೃತಿಕ

ಬಡಗಿನ ಯಕ್ಷಗಾನ ಕಲಾವಿದ ರಾಜೇಂದ್ರ ಗಾಣಿಗ ವಿಧಿವಶ

Views: 1

ಕುಂದಾಪುರ:ಯಕ್ಷಗಾನ ಯುವ ವೇಷಧಾರಿ ಹೆರಂಜಾಲು ರಾಜೇಂದ್ರ ಗಾಣಿಗ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 41ವರ್ಷ ವಯಸ್ಸಾಗಿತ್ತು.

ಎರಡೂವರೆ ದಶಕಗಳ ಕಾಲ ವಿವಿಧ ಮೇಳಗಳಲ್ಲಿ ವೇಷಧಾರಿಯಾಗಿದ್ದ ರಾಜೇಂದ್ರ ಗಾಣಿಗ ಅವರು ಮಾರಣಕಟ್ಟೆ, ಹಾಲಾಡಿ, ಸೌಕೂರು, ನೀಲಾವರ ಮೇಳಗಳಲ್ಲಿ ಹಾಗೂ ಸುಮಾರು ಹತ್ತು ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಪುರುಷ ವೇಷಧಾರಿಯಾಗಿ ಕಲಾ ಸೇವೆ ಮಾಡಿದ್ದರು.

ಅವಿವಾಹಿತರಾಗಿದ್ದ ರಾಜೇಂದ್ರ ಗಾಣಿಗ ತಾಯಿ ಹಾಗೂ ಅಪಾರ ಸಂಖ್ಯೆಯ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗ ಸೇರಿ ಕಲಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Related Articles

Back to top button
error: Content is protected !!