ಜನಮನ

ವಿದ್ಯಾರ್ಥಿನಿಗೆ ಕಿರುಕುಳ: ಶಿಕ್ಷಕನಿಗೆ ಮುಖ ಮತ್ತು ತಲೆಗೆ ಕಪ್ಪು ಎರಚಿ ಥಳಿತ

Views: 0

ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬನಿಗೆ ಅಪ್ರಾಪ್ತ ಬಾಲಕಿಯ ಕುಟುಂಬಸ್ಥರು ಥಳಿಸಿ ಆತನ ತಲೆ ಮತ್ತು ಮುಖಕ್ಕೆ ಕಪ್ಪು ಮಸಿ ಬಳಿದದ ಘಟನೆ ಜೈಪುರದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದೆ.

ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 16 ವರ್ಷದ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪಿ ಶಿಕ್ಷಕ ರಾಜೇಶ್ ವಿರುದ್ಧ ವಿದ್ಯಾರ್ಥಿನಿಯ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ. ತನಗೆ ಥಳಿಸಿರುವ ಬಾಲಕಿಯ ಮನೆಯವರ ವಿರುದ್ಧ ರಾಜೇಶ್ ಕೂಡ ಎಫ್‌ಐಆರ್ ದಾಖಲಿಸಿದ್ದಾರೆ.

ಕಾರನ್‌ಪುರ ವೃತ್ತಾಧಿಕಾರಿ ಸುಧಾ ಪಲಾವತ್‌ ಈ ಕುರಿತು ಮಾತನಾಡಿದ್ದು, ಕಿರುಕುಳದ ವಿಷಯ ತಿಳಿದ ವಿದ್ಯಾರ್ಥಿಯ ಕುಟುಂಬಸ್ಥರು ಶಾಲೆಗೆ ತೆರಳಿ ಆರೋಪಿಗೆ ಥಳಿಸಿದ್ದಾರೆ ಮತ್ತು ಆರೋಪಿತ ಶಿಕ್ಷಕನ ತಲೆ ಮತ್ತು ಮುಖಕ್ಕೆ ಬಣ್ಣವನ್ನು ಎರಚಿದ್ದಾರೆ ಎಂದು ಹೇಳಿದ್ದಾರೆ.

ಸರ್ಕಾರಿ ಶಿಕ್ಷಕನ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದ್ದು, ಶಿಕ್ಷಕ ಕೂಡ ಎಫ್‌ಐಅರ್‌ ದಾಖಲಿಸಿದ್ದಾರೆ. ಈ ಕುರಿತು ತನಿಖೆ ಮಾಡಲಾಗುತ್ತಿದೆ ಆದರೆ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Related Articles

Back to top button
error: Content is protected !!