ಜನಮನ
ಶಿವಮೊಗ್ಗ ತುಂಗಾ ನದಿಯಲ್ಲಿ ನೀರುಪಾಲಾದ ಇಬ್ಬರು ಮೀನುಗಾರರು

Views: 1
ತುಂಗಾ ನದಿಯಲ್ಲಿ ಮುಳುಗಿ ಇಬ್ಬರು ಮೀನುಗಾರರು ನೀರುಪಾಲಾದ ಘಟನೆ ಶಿವಮೊಗ್ಗ ನಗರದ ಕುರುಬರ ಪಾಳ್ಯ ಬಳಿ ನಡೆದಿದೆ.
ಅಗ್ನಿಶಾಮಕ ಸಿಬ್ಬಂದಿ, ದೊಡ್ಡಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದು, ನದಿ ದಂಡೆ ಮೇಲೆ ಮೊಬೈಲ್ ಹಾಗೂ ಬಟ್ಟೆಗಳು ಪತ್ತೆಯಾಗಿವೆ
ಫಯಾಜ್ ಅಹ್ಮದ್ (18), ಅಂಜುಂ ಖಾನ್ (19) ನೀರುಪಾಲಾದ ಮೀನುಗಾರರು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ದೊಡ್ಡಪೇಟೆ ಠಾಣಾ ಪೊಲೀಸರು ನೀರುಪಾಲಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ವೇಳೆ ತುಂಗ ನದಿ ದಂಡೆ ಮೇಲೆ ಮೊಬೈಲ್ ಹಾಗೂ ಬಟ್ಟೆಗಳು ಪತ್ತೆಯಾಗಿವೆ.
ಮೀನು ಹಿಡಿಯಲು ಹೋದ ವೇಳೆ ಯುವಕರು ನೀರು ಪಾಲಾಗಿದ್ದಾರೆ. ಸದ್ಯ ಬೋಟ್ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಕಾರ್ಯ ನಡೆಸುತ್ತಿದ್ದಾರೆ.






