ಜನಮನ

ಎಲ್ಲಾ ಪ್ರಯಾಣಿಕರ ಅನುಕೂಲಕ್ಕಾಗಿ ಬರಲಿವೆ ವಂದೇ ಸಾಧಾರಣ್​ ರೈಲುಗಳು: ಅಕ್ಟೋಬರ್​ನಲ್ಲಿ ಸ್ಲೀಪರ್​​ ಆವೃತ್ತಿ ಪ್ರಾರಂಭ

Views: 0

ಆರ್ಥಿಕವಾಗಿ ಹಿಂದುಳಿದವರು ಈ ರೈಲ್ವೇನಲ್ಲಿ ಪ್ರಯಾಣಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ವಂದೇ ಸಾಧಾರಣ್​ ರೈಲುಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಈ ವರ್ಷದ ಅಕ್ಟೋಬರ್​ನಲ್ಲಿ ‘ವಂದೇ ಸಾಧರಣ್ ಎಕ್ಸ್​​ಪ್ರೆಸ್’ಎಂಬ ಹೆಸರಿನ ಸ್ಲೀಪರ್ ಆವೃತ್ತಿಯನ್ನು ಪ್ರಾರಂಭಿಸಲಿದೆ.

‘ವಂದೇ ಭಾರತ್​​ ಎಕ್ಸ್​​ಪ್ರೆಸ್’​​ ಈಗಾಗಲೇ ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದೆ. ವಂದೇ ಭಾರತ್​ನಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳು ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕವಾಗಿದೆ. ಆದರೆ ಹೆಚ್ಚಿನ ದರಗಳಿಂದಾಗಿ ಆರ್ಥಿಕವಾಗಿ ಹಿಂದುಳಿದವರು ಈ ರೈಲ್ವೇನಲ್ಲಿ ಪ್ರಯಾಣಿಸಲು ಸಾಧ್ಯವಾಗಿಲ್ಲ. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ವಂದೇ ಸಾಧಾರಣ್​ ರೈಲುಗಳನ್ನು ಪ್ರಾರಂಭಿಸಲು ಭಾರತೀಯ ರೈಲ್ವೇ ಮುಂದಾಗಿದೆ. ಈ ವರ್ಷದ ಅಕ್ಟೋಬರ್​ನಲ್ಲಿ ‘ವಂದೇ ಸಾಧರಣ್ ಎಕ್ಸ್​​ಪ್ರೆಸ್’ ಎಂಬ ಹೆಸರಿನ ಸ್ಲೀಪರ್ ಆವೃತ್ತಿಯನ್ನು ಪ್ರಾರಂಭಿಸಲಿದೆ.

ಒಟ್ಟು 22 ಕೋಚ್​ಗಳು

‘ವಂದೇ ಸಾಧರಣ್ ಎಕ್ಸ್​​ಪ್ರೆಸ್’ ರೈಲ್ವೇ 22 ಕೋಚ್‌ಗಳನ್ನು ಹೊಂದಿದ್ದು, ಎರಡೂ ಭಾಗಗಳಲ್ಲಿ 2 WAP-5 ಇಂಜಿನ್‌ಗಳನ್ನು ಹೊಂದಿದೆ. ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುವ ರೈಲು ವಂದೇ ಭಾರತ್ ತರಹದ ಕ್ಲಾಸಿ ಇಂಟೀರಿಯರ್ ಮತ್ತು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದು, ಸ್ವಯಂಚಾಲಿತ ಬಾಗಿಲುಗಳು ಮತ್ತು ಎಸಿ ಹೊಂದಿರುವುದಿಲ್ಲ

ಈ ಕುರಿತಾಗಿ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಬಿ.ಜಿ ಮಲ್ಯ ಮಾತನಾಡಿ, ಈ ವರ್ಷದಲ್ಲಿ ನಾವು ವಂದೇ ಭಾರತ್​ ಸ್ಲೀಪರ್ ಆವೃತ್ತಿಯನ್ನು ಪ್ರಾರಂಭಿಸುತ್ತೇವೆ. ಅದೇ ರೀತಿಯಾಗಿ ಈ ವರ್ಷದಿಂದಲೇ ವಂದೇ ಮೆಟ್ರೋವನ್ನು ಸಹ ಪ್ರಾರಂಭಿಸುತ್ತೇವೆ. ಆರ್ಥಿಕವಾಗಿ ಹಿಂದೂಳಿದ ಪ್ರಯಾಣಿಕರಿಗಾಗಿ ಈ ರೈಲನ್ನು ಪ್ರಾರಂಭಿಸುತ್ತೇವೆ, ಇದನ್ನು ನಾನ್-ಎಸಿ ಪುಶ್-ಪುಲ್ ರೈಲು ಎಂದು ಕರೆಯಲಾಗುತ್ತದೆ. ಇದು 22 ಕೋಚ್‌ಗಳು ಮತ್ತು ಲೊಕೊಮೊಟಿವ್ ಅನ್ನು ಹೊಂದಿರುತ್ತದೆ. ಅಕ್ಟೋಬರ್ 31 ರಂದು ಈ ರೈಲುಗಳನ್ನು ಓಡಾಟ ನಡೆಸಲಿವೆ ಎಂದರು.

Related Articles

Back to top button
error: Content is protected !!