ಜನಮನ

ಸ್ವಾಮೀಜಿ ಸಿಕ್ಕ ನಂತರ ಸತ್ಯ ಬಯಲು: ಚೈತ್ರ      ಕುಂದಾಪುರ ಸ್ಪೋಟಕ ಹೇಳಿಕೆ,   ಹಾಲಮಠದಲ್ಲಿ ನಡೆದಿತ್ತಾ₹7 ಕೋಟಿ ಡೀಲ್?

Views: 0

ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ಟೀಂ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಮತ್ತಷ್ಟು ಹಿನ್ನೆಲೆ ಬಯಲಾಗುತ್ತಿದ್ದು, ವಂಚನೆಗೊಳಗಾದ ಗೋವಿಂದ ಬಾಬು ಮತ್ತು ಚೈತ್ರಾ ಹಿರೇಹಡಗಲಿಯ ಹಾಲಮಠಕ್ಕೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿದೆ.

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಮಠದ ಅಭಿನವ ಹಾಲಶ್ರೀ, ವಂಚನೆ ಪ್ರಕರಣದ ಮೂರನೇ ಆರೋಪಿಯಾಗಿದ್ದಾರೆ. ಚೈತ್ರಾ ಮತ್ತು ಗೋವಿಂದ ಬಾಬು ನಡುವೆ ಹಾಲಶ್ರೀ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಹಾಲಮಠದಲ್ಲೇ ಏಳು ಕೋಟಿ ರೂಪಾಯಿ ಡೀಲ್ ನಡೆದಿತ್ತು ಎಂದು ಆರೋಪಿಸಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಚೈತ್ರಾ ಮತ್ತು ಗೋವಿಂದ ಬಾಬು ಒಟ್ಟಿಗೆ ಹಾಲಮಠಕ್ಕೆ ಭೇಟಿ ನೀಡಿರುವ ಫೋಟೋಗಳು ಲಭ್ಯವಾಗಿವೆ.

ವಿಧಾನಸಭಾ ಚುನಾವಣೆಗೆ ಮುನ್ನ ಗೋವಿಂದ ಬಾಬು ಅವರನ್ನು ಕರೆದುಕೊಂಡು ಹಾಲಮಠಕ್ಕೆ ತೆರಳಿದ್ದ ಚೈತ್ರಾ, ಹಾಲಶ್ರೀ ಸಮ್ಮುಖದಲ್ಲಿ ಡೀಲ್ ಕುದುರಿಸಿದ್ದರು. ಇದಕ್ಕಾಗಿ ಹಾಲಶ್ರೀ ಗೋವಿಂದ ಬಾಬು ಅವರಿಂದ 1.50 ಕೋಟಿ ರೂಪಾಯಿ ಹಣ ಪಡೆದಿದ್ದರು ಎಂದು ತಿಳಿದು ಬಂದಿದೆ.

ಗೋವಿಂದ ಬಾಬು ಮತ್ತು ಅಭಿನವ ಹಾಲಶ್ರೀ

ಚೈತ್ರಾ ಕುಂದಾಪುರ ಉಡುಪಿಯಲ್ಲಿ ಬಂಧನವಾಗುತ್ತಿದ್ದಂತೆ ಹಾಲಶ್ರೀ ಮಠದಿಂದ ಕಾಣೆಯಾಗಿದ್ದರು. ಬುಧವಾರ ಬೆಳಗಿನಿಂದ ಮೊಬೈಲ್ ಆಫ್ ಮಾಡಿಕೊಂಡಿದ್ದ ಸ್ವಾಮೀಜಿ, ಮಠಕ್ಕೂ ಬಾರದೆ, ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಆದರೆ, ಸಂಜೆಯ ವೇಳೆಗೆ ಹಾಲಶ್ರೀ ಅವರನ್ನು ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಂಚನೆ ಕೇಸ್​ಗೆ ಟ್ವಿಸ್ಟ್ : ಇಂದಿರಾ ಕ್ಯಾಂಟೀನ್ ಹೆಸರೇಳಿದ್ದೇಕೆ ಚೈತ್ರಾ ಕುಂದಾಪುರ

ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ಟೀಂ ಉದ್ಯಮಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.

ಇಂದು ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆ ತರುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚೈತ್ರಾ ಕುಂದಾಪುರ, ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ಇಷ್ಟೆಲ್ಲಾ ಮಾಡಿದ್ದಾರೆ. ಸ್ವಾಮೀಜಿ ಅರೆಸ್ಟ್ ಆಗಲಿ ಸತ್ಯ ಹೊರಬರುತ್ತೆ. ದೊಡ್ಡ ದೊಡ್ಡವರ ಹೆಸರು ಹೊರಬರುತ್ತೆ ಎಂದು ಹೇಳಿದ್ದಾರೆ.

ಏನಿದು ಚೈತ್ರಾ ಕುಂದಾಪುರ ಹೇಳಿದ ಇಂದಿರಾ ಕ್ಯಾಂಟಿನ್ ಬಿಲ್ ಕಥೆ?

ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ಗೋವಿಂದ ಬಾಬು ಅವರೇ ಷಡ್ಯಂತ್ರ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ಗಂಭೀರ ಆರೋಪ ಮಾಡಿದ್ದಾರೆ. ಪೊಲಿಟಿಕಲ್ 360ಗೆ ಲಭ್ಯವಾದ ಮಾಹಿತಿ ಪ್ರಕಾರ, 98 ಚೆಫ್ ಟ್ಯಾಕ್ ಎಂಬ ಕಂಪನಿ ಮೂಲಕ 2017 ರಿಂದ ಗೋವಿಂದ ಬಾಬು ಇಂದಿರಾ ಕ್ಯಾಂಟೀನ್ ನಡೆಸುತ್ತಿದ್ದಾರೆ. ಗೋವಿಂದ ಬಾಬು ಅವರಿಗೆ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ ನ ಬಾಕಿ ಬಿಲ್ 35 ಕೋಟಿ ರೂಪಾಯಿ ಬರಲು ಬಾಕಿಯಿದೆಯಂತೆ. ಚೈತ್ರಾಳನ್ನು ಲಾಕ್ ಮಾಡಿಕೊಡು, ಬಿಲ್ ಬಿಡುಗಡೆ ಮಾಡ್ತೀವಿ ಎಂದು ಗೋವಿಂದ ಬಾಬುಗೆ ಸೂಚಿಸಿದ್ದಾರೆ. ಈ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಚೈತ್ರಾ ಆರೋಪಿಸಿದ್ದಾರೆ.

ಡೀಲ್ ರಾಣಿ ‘ಚೈತ್ರಾ’ ಕುಂದಾಪುರ ಹಿನ್ನೆಲೆ ನಿಮಗೆ ಗೊತ್ತಾ?

 

ನಿಮ್ಗೆ ಎಂಎಲ್​ಎ ಟಿಕೆಟ್ ಕೊಡಿಸುತ್ತೇನೆಂದು ಕೋಟ್ಯಂತರ ರೂಪಾಯಿ ಬಡಿದು ಬಾಯಿಗೆ ಹಾಕಿಕೊಂಡಿದ್ದಾಳೆ ಈ ಕಿಲಾಡಿ ಲೇಡಿ.

ವಂಚನೆ ಆರೋಪದ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಂಡ್​ ಗ್ಯಾಂಗ್​ ಅನ್ನು ಬೆಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಹಾಗಿದ್ರೆ ಯಾರು ಈ ಚೈತ್ರಾ ಕುಂದಾಪುರ ಅನ್ನೋದನ್ನ ನೋಡುವುದಾದರೆ.. ಚೈತ್ರಾ ಕುಂದಾಪುರ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವಳು. ಬಡ ಕುಟುಂಬದಲ್ಲಿ ಹುಟ್ಟಿದ ಇವಳ ತಂದೆ ತಾಯಿ ಹೈನುಗಾರಿಕೆ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಪದವಿ

ಚೈತ್ರ ಕುಂದಾಪುರ ತನ್ನ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಕುಂದಾಪುರದಲ್ಲಿಯೇ ಮುಗಿಸಿದ್ದಳು. ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರಿನ ಕೊಣಾಜೆಯ(ಮಂಗಳೂರು ವಿಶ್ವವಿದ್ಯಾನಿಲಯ)ಲ್ಲಿ ಪೂರ್ಣಗೊಳಿಸಿದ್ದಾಳೆ. ಆಗಲೇ ಈಕೆ ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿ ಆಗಿದ್ದಳು.ಹಲವು ಸುದ್ದಿ ವಾಹಿನಿಗಳಲ್ಲಿ ಕೆಲಸ

ಆರಂಭದಲ್ಲಿಯೇ ಎಬಿವಿಪಿ ಹುಡಗರ ಜೊತೆ ಗುರುತಿಸಿಕೊಂಡಿದ್ದ ಚೈತ್ರಾ, ಪದವಿ ಶಿಕ್ಷಣ ಪಡೆಯುವ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಬಿವಿಪಿಯಲ್ಲಿ ತೊಡಗಿಸಿಕೊಂಡಿದ್ದಳು. ಎಬಿವಿಪಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಚೈತ್ರಾ, ಎಬಿವಿಪಿಯಲ್ಲಿ ವಿವಿಧ ಜವಾಬ್ದಾರಿಯನ್ನು ಕೂಡ ನಿರ್ವಹಿಸಿದ್ದಳು. ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರ ಕುಂದಾಪುರ, ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಳು. ತನ್ನ ದ್ವೇಷಕಾರುವ ಭಾಷಣದ ಮೂಲಕವೇ ಹೆಸರು ಮಾಡಿದ್ದಳು

Related Articles

Back to top button
error: Content is protected !!