ಜನಮನ

ರೈಲಿನಡಿ ಸಿಲುಕಿಕೊಂಡಿದ್ದ ಶಿಕ್ಷಕ; ಪ್ರಾಣಾಪಾಯದಿಂದ ಪಾರು

Views: 0

ದಾವಣಗೆರೆ: ಗೂಡ್ಸ್ ರೈಲಿನಡಿ ಸಿಲುಕಿಕೊಂಡಿದ್ದ ಶಿಕ್ಷಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ (ಸೆ.14) ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿ ವರದಿಯಾಗಿದೆ.

ಬಿ.ದುರ್ಗದಲ್ಲಿ ಮುಖ್ಯ ಶಿಕ್ಷಕನಾಗಿದ್ದ ಶಿವಕುಮಾರ್ ಎಂಬ ವ್ಯಕ್ತಿ, ಹಳಿ ದಾಟಲು ಹೋದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ 1 ರಿಂದ 2ಕ್ಕೆ ಹೋಗಲು ಹಳಿ ದಾಟುವಾಗ ಗೂಡ್ಸ್​ ರೈಲು ಏಕಾಏಕಿ ಬಂದ ಕೂಡಲೇ ಹಳಿಯ ನಡುವೆ ಮಲಗಿಕೊಂಡು ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ರೈಲಿನ ಹಳಿಗಳನ್ನು ದಾಟಲು ಹೋದ ಶಿಕ್ಷಕ, ರೈಲಿನಡಿ ಸಿಲುಕಿರುವುದನ್ನು ಗಮನಿಸಿದ ರೈಲ್ವೆ ಇಲಾಖೆ ಸಿಬ್ಬಂದಿ, ಕೂಡಲೇ ರೈಲನ್ನು ನಿಲ್ಲಿಸಲು ಸೂಚನೆ ನೀಡಿದ್ದಾರೆ. ತದನಂತರ ವ್ಯಕ್ತಿಯನ್ನು ರಕ್ಷಣೆ ಮಾಡಿದ ಆರ್​ಪಿಎಫ್ ಪೊಲೀಸರು, ಗಾಯಗೊಂಡ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ‌ ಚಿಕಿತ್ಸೆ ಕೊಡಿಸಿದ್ದಾರೆ.

Related Articles

Back to top button
error: Content is protected !!