ಜನಮನ

ಮಲ್ಪೆ: ಲಾರಿಯಿಂದ ಗ್ರಾನೈಟ್ ಇಳಿಸುವಾಗ ಆಯತಪ್ಪಿ ಮೈಮೇಲೆ ಬಿದ್ದು ಇಬ್ಬರು ಕಾರ್ಮಿಕರು ಸಾವು     

Views: 0

ಕಂಟೈನರ್ ಲಾರಿಯಿಂದ ಗ್ರಾನೈಟ್ ಇಳಿಸುವ ವೇಳೆ ನಡೆದ ಅವಘಡದಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಗುರುವಾರ ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ತೊಟ್ಟಂನಲ್ಲಿ ನಡೆದಿದೆ.

ಮೃತ ಕಾರ್ಮಿಕರನ್ನು ಒಡಿಶಾ ಮೂಲದ ಬಾಬುಲ್ಲ (38 ವ) ಮತ್ತು ಭಾಸ್ಕರ (40 ವ) ಎಂದು ಗುರುತಿಸಲಾಗಿದೆ.

ತೊಟ್ಟಂನ ಕರಾವಳಿ ಯುವಕ ಮಂಡಳಿಯು ಮನೆಯೊಂದಕ್ಕೆ ಗ್ರಾನೈಟ್ ತರಲಾಗಿತ್ತು. ಇದನ್ನು ಇಳಿಸುವ ವೇಳೆ ಆಯತಪ್ಪಿ ಗ್ರಾನೈಟ್ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈಶ್ವರ್ ಮಲ್ಪೆ ತಂಡದವರು ಮತ್ತು ಸ್ಥಳೀಯರು ಮೃತ ದೇಹ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button
error: Content is protected !!