ಆಂಧ್ರ ಪ್ರದೇಶ:ಶಾಲೆಗಳಲ್ಲಿ ಮೊಬೈಲ್ ಬ್ಯಾನ್, ವಿದ್ಯಾರ್ಥಿಗಳು, ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ

Views: 0
ಆಂಧ್ರ ಪ್ರದೇಶ ಸರ್ಕಾರ ರಾಜ್ಯಾದ್ಯಂತ ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಿದೆ.
ವಿದ್ಯಾರ್ಥಿಗಳು ಶಾಲೆಗಳಿಗೆ ಮೊಬೈಲ್ ತರುವುದನ್ನು ನಿಷೇಧಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಅಲ್ಲದೇ ತರಗತಿಗಳಲ್ಲಿ ಶಿಕ್ಷಕರು ಸಹ ಮೊಬೈಲ್ ಬಳಸುವುದನ್ನು ಶಿಕ್ಷಣ ಇಲಾಖೆ ನಿಷೇಧಿಸಿದೆ.
ತರಗತಿಗಳಿಗೆ ಹೋಗುವ ಮುನ್ನ ಶಿಕ್ಷಕರು ತಮ್ಮ ಮೊಬೈಲ್‌ಗಳನ್ನು ಮುಖ್ಯಶಿಕ್ಷಕರ ಬಳಿ ಕೊಟ್ಟು ಹೋಗಬೇಕು ಎಂದು ಸೂಚಿಸಿದೆ.
ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಜಾಗತಿಕ ಶಿಕ್ಷಣ ಮೇಲ್ವೀಚಾರಣಾ ವರದಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಕರಿಂದ ಮಕ್ಕಳಿಗೆ ಉಂಟಾಗುವ ತೊಂದರೆ ತಪ್ಪಿಸಲು ಶಿಕ್ಷಕರು ತರಗತಿಗಳಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಸಂಸ್ಥೆಯು ಶಾಲೆಗಳಲ್ಲಿ ಫೋನ್ ಬಳಕೆಯನ್ನು ನಿಷೇಧಿಸಿದೆ. ಡೇಟಾ ಗೌಪ್ಯತೆ, ಸುರಕ್ಷತೆ ಮತ್ತು ಮಗುವಿನ ಯೋಗಕ್ಷೇಮ ಕಾಳಜಿಯಿಂದ ಜಾಗತಿಕವಾಗಿ ನಾಲ್ಕು ದೇಶಗಳಲ್ಲಿ ಈ ಕ್ರಮ ಅನುಷ್ಠಾನಕ್ಕೆ ಬಂದಿದೆ.