ಮಾಹಿತಿ ತಂತ್ರಜ್ಞಾನ

ಕುಂದಾಪುರ; ಫೇಸ್ ಬುಕ್ ಮೂಲಕ ಸಂದೇಶ ಕಳುಹಿಸಿ ಗಿಫ್ಟ್‌ ಹೆಸರಲ್ಲಿ ಮಹಿಳೆಗೆ 11.92 ಲಕ್ಷ ರೂ.ವಂಚನೆ: ಪ್ರಕರಣ ದಾಖಲು

Views: 181

ಕನ್ನಡ ಕರಾವಳಿ ಸುದ್ದಿ : ಫೇಸ್ ಬುಕ್ ಮೂಲಕ ಸಂದೇಶ ಕಳುಹಿಸಿ, ಮೊಬೈಲ್, ಬ್ಯಾಗ್ ಹಾಗೂ 50 ಸಾವಿರ ಡಾಲರ್ (56 ಲಕ್ಷ ರೂ.) ನೀಡುವುದಾಗಿ ಸಂದೇಶ ಕಳುಹಿಸಿ, ಹಂತ ಹಂತವಾಗಿ  11,92,500 ರೂ. ಪಡೆದು ಸೈಬರ್‌ ವಂಚಕರು ವಂಚಿಸಿರುವುದಾಗಿ ಕೋಟೇಶ್ವರ ಗ್ರಾಮದ ಹೊಸ ಬಡಾಕೇರಿ ಹೂವಿನಕೆರೆ ನಿವಾಸಿ ರಮೇಶ ಅವರ ಪತ್ನಿ ಅಭಿನಯ ದೂರು ನೀಡಿದ್ದಾರೆ.

ನಾನು ಗೃಹಿಣಿಯಾಗಿದ್ದು, ಕಳೆದ ಮೇ ಮೊದಲ ವಾರದಲ್ಲಿ ನನಗೆ ಡೆನಿಯಲ್ ಮೈಕಲ್ ಎಂಬುವರಿಂದ ಫೇಸ್ ಬುಕ್ ಖಾತೆಗೆ ಗುಡ್ ಮಾರ್ನಿಂಗ್ ಅನ್ನುವ ಸಂದೇಶ ಬಂದಿದ್ದು, ಆ ಬಳಿಕ ಒಂದು ಮೊಬೈಲ್, ಬ್ಯಾಗ್, 50 ಸಾವಿರ ಡಾಲರ್‌ ಗಿಫ್ಟ್ ರೂಪದಲ್ಲಿ ಮನೆಗೆ ಕಳುಹಿಸುವುದಾಗಿ ಸಂದೇಶ ಬಂದಿದೆ. ಆ ಹಣ, ಗಿಫ್ಟ್ ಎಲ್ಲ ಮುಂಬಯಿಯಲ್ಲಿದ್ದು, ಅದು ನಿಮ್ಮಮನೆಗೆ ಬರಬೇಕಾದರೆ 50 ಸಾವಿರ ರೂ. ಕಳುಹಿಸಿ ಎಂದಿದ್ದಕ್ಕೆ ನಾನು ಮೇ 16ರಂದು 5 ಸಾವಿರ ರೂ, ಮತ್ತೆ 25 ಸಾವಿರ ರೂ. ಕಳುಹಿಸಿದ್ದೇನೆ. ಆ ಬಳಿಕ ಮತ್ತೆ ಹಂತ ಹಂತವಾಗಿ ಮೇ ನಿಂದ ಆಗಸ್ಟ್ ವರೆಗೆ ಒಟ್ಟಾರೆ 11,92,500 ರೂ. ಕಳುಹಿಸಿದ್ದು, ಸೈಬರು ವಂಚಕರು ಮೋಸ ಮಾಡಿ ಪಡೆದು ಕೊಂಡಿರುವುದಾಗಿ ಕುಂದಾಪುರ ಠಾಣೆಯಲ್ಲಿ ದೂರು ನೀಡಿ, ಪ್ರಕರಣ ದಾಖಲಾಗಿದೆ.

Related Articles

Back to top button