ಆರ್ಥಿಕ

ಶ್ರೀರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಗೆ ಸರ್ವತೋಮುಖ ವ್ಯವಹಾರ ಅಭಿವೃದ್ಧಿ ಕ್ರೆಡಿಟ್ ಸಹಕಾರಿ ಸಂಘ ಪ್ರಶಸ್ತಿ

Views: 0

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯಲ್ಲಿ ತನ್ನ ಸದಸ್ಯ ಸೇವೆಯಲ್ಲಿ ಯಶಸ್ವಿ 29 ವರ್ಷಗಳನ್ನು ಪೂರೈಸಿ ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲಿ ಒಂದಾದ ರಾಮಕೃಷ್ಣ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಲಿಮಿಟೆಡ್ 31.3.2023 ಕ್ಕೆ ರೂ .453 ಕೋಟಿ ಠೇವಣಾತಿ, ರೂ .387 ಕೋಟಿ ಹೊರಬಾಕಿ ಸಾಲ, 2022- 23ನೇ ಸಾಲಿನಲ್ಲಿ 145 ಕೋಟಿ ವ್ಯವಹಾರದಲ್ಲಿ ವೃದ್ಧಿ, 9.84 ಕೋಟಿ ನಿವ್ವಳ ಲಾಭ ಹಾಗೂ ಜೀರೋ ಪರ್ಸೆಂಟ್ ನೆಟ್ ಎನ್ ಪಿ ಎ ಮತ್ತು ರೂ.3089 ಕೋಟಿ ಒಟ್ಟು ವ್ಯವಹಾರವನ್ನು ಸಾಧಿಸಿರುವುದಕ್ಕೆ ಬ್ಯಾಂಕ್ ನವರ ಈ ಸಾಧನೆಯನ್ನು ಗುರುತಿಸಿ 2022- 23ನೇ ಸಾಲಿನಲ್ಲಿ ಸರ್ವತೋಮುಖ ವ್ಯವಹಾರ ಅಭಿವೃದ್ಧಿ ಹೊಂದಿದ ಅತ್ಯುತ್ತಮ ಕ್ರೆಡಿಟ್ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಪ್ರಶಸ್ತಿಯನ್ನು ಅದು.19 ರಂದು ನಡೆದ ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ.ರಾಜೇಂದ್ರಕುಮಾರ್ ರವರು, ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಸರ್ವ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಹಕಾರ ಯೂನಿಯನ್ ನ ಅಧ್ಯಕ್ಷರ ಸಮಕ್ಷಮದಲ್ಲಿ ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ.ರೈ ಅವರಿಗೆ ಹಾಗೂ ಮಹಾ ಪ್ರಬಂಧಕ ಗಣೇಶ್ ಜಿ.ಕೆ ಅವರಿಗೆ ಪ್ರಧಾನ ಮಾಡಿದರು.

ಈ ಪ್ರಶಸ್ತಿಯನ್ನು ಸಂಘವು 12ನೇ ಬಾರಿ ಹಾಗೂ 7 ವರ್ಷಗಳಿಂದ ನಿರಂತರವಾಗಿ ಪಡೆದುಕೊಂಡು ಬಂದಿರುತ್ತದೆ.

Related Articles

Back to top button
error: Content is protected !!