ನಟಿ ರಮ್ಯಾಕೃಷ್ಣ ದಾಂಪತ್ಯ ಜೀವನದಲ್ಲಿ ಬಿರುಕು? ಈ ಬಗ್ಗೆ ನಟಿ ಹೇಳಿದ್ದೇನು?
Views: 59
ಕನ್ನಡ ಕರಾವಳಿ ಸುದ್ದಿ: ರಮ್ಯಾ ಕೃಷ್ಣರ ವಿಚ್ಛೇದನದ ಸುದ್ದಿಯೊಂದು ಹರಿದಾಟುತ್ತಿತ್ತು. ರಮ್ಯಾ ಕೃಷ್ಣ ಪತಿ ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣವಂಶಿಯಿಂದ ದೂರವಾಗಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದೀಗ ಈ ಗಾಸಿಪ್ ಬಗ್ಗೆ ನಟಿ ಮಾತನಾಡಿದ್ದಾರೆ.
.ತಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂಬುದಾಗಿ ರಮ್ಯಾ ಕೃಷ್ಣನ್ ಹೇಳಿದ್ದಾರೆ. ಅಂದಿನಿಂದ ಈ ವ್ಯವಸ್ಥೆಯು ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಹಾಗೂ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿದೆ ಎಂದು ನಟಿ ಹೇಳಿದ್ದಾರೆ.
ರಾ ಟಾಕ್ಸ್ ವಿತ್ ವಿಕೆ ಎಂಬ ಪಾಡ್ ಕಾಸ್ಟ್ನಲ್ಲಿ ರಮ್ಯಾ ಕೃಷ್ಣನ್ ಮಾತನಾಡಿದ್ದಾರೆ. ನಾವಿನ್ನೂ ದಂಪತಿಯಾಗಿಯೇ ಇದ್ದೇವೆ. ಆದರೆ, ನಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ನಗರಗಳಲ್ಲಿ ಸಂತೋಷದಿಂದ ವಾಸಿಸುತ್ತಿದ್ದೇವೆ. ನಮ್ಮ ವೃತ್ತಿಯ ಕಾರಣದಿಂದಾಗಿ ಈ ನಿರ್ಧಾರ ತಳೆದಿದ್ದೇವೆ ಎಂದಿದ್ದಾರೆ.
ಹೈದರಾಬಾದ್ನಿಂದ ಚೆನ್ನೈಗೆ ಪ್ರತಿ 15 ದಿನಗಳಿಗೊಮ್ಮೆ ಚಿತ್ರೀಕರಣಕ್ಕಾಗಿ ಪ್ರಯಾಣಿಸಬೇಕಾದ ಸಂದರ್ಭ ಬಂದಿತ್ತು. ನಿರಂತರ ಪ್ರಯಾಣವು ನನ್ನ ಮಗನ ಆರೋಗ್ಯದ ಮೇಲೆ ಪರಿಣಾಮ ಬೀರಲು ಆರಂಭಿಸಿತ್ತು. ನಾನು ಪ್ರತಿ ಬಾರಿ ನಗರ ಬಿಟ್ಟು ಹೋದಾಗಲೂ ಮಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಹೀಗಾಗಿ, ಮಗನ ಆರೋಗ್ಯದ ದೃಷ್ಟಿಯಿಂದ ಆತನನ್ನು ಚೆನ್ನೈನ ಶಾಲೆಗೆ ಸೇರಿಸಲು ನಿರ್ಧರಿಸಿದೆವು.
ಅಂದಿನಿಂದ ಈ ವ್ಯವಸ್ಥೆಯು ನಮ್ಮಿಬ್ಬರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಹಾಗೂ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಿದೆ ಎಂದು ನಟಿ ಹೇಳಿದ್ದಾರೆ.
ರಮ್ಯಾ ಕೃಷ್ಣನ್ ಮತ್ತು ಕೃಷ್ಣವಂಶಿ 2003ರ ಜೂನ್ 12 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2005ರ ಫೆಬ್ರವರಿಯಲ್ಲಿ ಈ ದಂಪತಿಗೆ ಪುತ್ರ ರಿತ್ವಿಕ್ ವಂಶಿ ಜನಿಸಿದ.






