ಸಾಂಸ್ಕೃತಿಕ

ಮಾರಣಕಟ್ಟೆ ಯಕ್ಷಗಾನ ಮೇಳದ ಖ್ಯಾತ ಸ್ತ್ರೀ ವೇಷಧಾರಿ ಚಂದ್ರ ಶೆಟ್ಟಿ ಬಿಜೂರು ನಿಧನ

Views: 126

ಕನ್ನಡ ಕರಾವಳಿ ಸುದ್ದಿ: ಮಾರಣಕಟ್ಟೆ ಮೇಳದ ಖ್ಯಾತ ಯಕ್ಷಗಾನ ಕಲಾವಿದ, ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ಚಂದ್ರ ಶೆಟ್ಟಿ ಬಿಜೂರು ಅವರು ಅಕ್ಟೋಬರ್ 19ರಂದು ಇಹಲೋಕ ತ್ಯಜಿಸಿದ್ದಾರೆ.

ಬಡಗು ತಿಟ್ಟು ಯಕ್ಷಗಾನ ಶೈಲಿಯಲ್ಲಿ ತಮ್ಮ ವಿಶಿಷ್ಟ ಅಭಿನಯ ಹಾಗೂ ಆಕರ್ಷಕ ಸ್ತ್ರೀ ವೇಷಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ, ಮೇಳದ ಜನಪ್ರಿಯ ವೇಷಧಾರಿಗಳಲ್ಲಿ ಒಬ್ಬರಾಗಿದ್ದರು.

ಅವರ ನಿಧನಕ್ಕೆ ಯಕ್ಷಗಾನ ಅಭಿಮಾನಿಗಳು, ಸಹ-ಕಲಾವಿದರು ಹಾಗೂ ಮಾರಣಕಟ್ಟೆ ಮೇಳದ ಒಡನಾಡಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

 

Related Articles

Back to top button
error: Content is protected !!