ಇತರೆ

ಅಬುಧಾಬಿಯಲ್ಲಿ ಕೋಟೇಶ್ವರ ಕುಂಬ್ರಿಯ ಯುವಕ ಸಾವು, ಅ.18ರಂದು ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

Views: 348

ಕನ್ನಡ ಕರಾವಳಿ ಸುದ್ದಿ: ವಿದೇಶದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಕೋಟೇಶ್ವರದ ಯುವಕನೊಬ್ಬ ಅಸಹಜವಾಗಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಕೋಟೇಶ್ವರದ ಕುಂಬ್ರಿ ಬಳಿ ನಿವಾಸಿ ಜಾರ್ಜ್ ಕ್ರಾಸ್ತಾ ಹಾಗೂ ಸುನೀತಾ ಕ್ರಾಸ್ತಾ ಅವರ ಪುತ್ರ ಲಿಂಕನ್ ಕ್ರಾಸ್ತಾ (29) ಅವರು ಮೃತಪಟ್ಟ ಯುವಕ ಹಾಗೂ ನ್ಯೂಟನ್ ಕ್ರಾಸ್ತಾ ಅವರ ಸಹೋದರನಾಗಿದ್ದಾರೆ.

ಲಿಂಕನ್ ಕ್ರಾಸ್ತಾ ಅವರು ಕೆಲವು ಸಮಯಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡುತ್ತ ರೂಮ್ ನಲ್ಲಿ ವಾಸ್ತವ್ಯ ಹೂಡಿದ್ದರು. ಸಾವಿನ ಕುರಿತಾಗಿ ಖಚಿತ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಲಿಂಕನ್ ಕ್ರಾಸ್ತಾ ಅವರ ಅಂತ್ಯಕ್ರಿಯೆಯು ಭಾನುವಾರ ಅಕ್ಟೋಬರ್ 18, 2026 ರಂದು ಸಂಜೆ 4:00 ಗಂಟೆಗೆ ಕೋಟೇಶ್ವರದ ಸಂತ ಅಂತೋನಿ ಚರ್ಚ್‌ನಲ್ಲಿ ನೆರವೇರಲಿದೆ. ಅದಕ್ಕೂ ಮುನ್ನ ಮಧ್ಯಾಹ್ನ 3:30ಕ್ಕೆ ಅವರ ನಿವಾಸದಲ್ಲಿ ಮೃತದೇಹದ ಅಂತಿಮ ದರ್ಶನ ನಡೆಯಲಿದೆ.

Related Articles

Back to top button
error: Content is protected !!