ಯುವಜನ

ಪ್ರಿಯಕರನಿಗೆ ಜಾಮೀನು ಕೊಡಿಸಲು ಬೇಕಿದ್ದ ಹಣ ಹೊಂದಿಸಲು ಮಾದಕ ವಸ್ತು ಸಾಗಿಸಿದ ಪ್ರಿಯತಮೆ ಅರೆಸ್ಟ್ 

Views: 39

ಕನ್ನಡ ಕರಾವಳಿ ಸುದ್ದಿ: ಮಾದಕ ವಸ್ತು ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಿಯಕರನಿಗೆ ಜಾಮೀನು ಕೊಡಿಸಲು ಬೇಕಿದ್ದ ಹಣ ಹೊಂದಿಸಲು ಮಾದಕ ವಸ್ತು ಸಾಗಿಸಿದ ಪ್ರಿಯತಮೆ ನಾಗ ಸೌಮ್ಯಳನ್ನು ಆಂಧ್ರಪ್ರದೇಶ ಪೊಲೀಸರು ವಿಜಯವಾಡದಲ್ಲಿ ಬಂಧಿಸಿದ್ದಾರೆ.

3 ತಿಂಗಳ ಹಿಂದೆ ಚಿತ್ತೂರಲ್ಲಿ ಮಾದಕವಸ್ತು ಪ್ರಕರಣದಲ್ಲಿ ನಾಗ ಸೌಮ್ಯಳ ಪ್ರಿಯಕರನ ಬಂಧನವಾಗಿತ್ತು. ಆತನನ್ನು ಜಾಮೀನಿನ ಮೇಲೆ ಬಿಡಿಸಿಕೊಂಡು ಬರಲು ಹಣ ಬೇಕಿದರಿಂದ ನಾಗ ಸೌಮ್ಯ ಬೆಂಗಳೂರಿನಿಂದ ವಿಜಯವಾಡಕ್ಕೆ 110 ಗ್ರಾಂ ಎಂಡಿಎಂಎ ಮಾತ್ರೆ ಸಾಗಿಸಲು ಒಪ್ಪಿಕೊಂಡಳು. ಬಶೀರ್ ಎಂಬಾತ ಈ ಕೆಲಸಕ್ಕಾಗಿ ಆಕೆಗೆ 50,000 ರು. ನೀಡುವ ಆಮಿಷ ಒಡ್ಡಿದ್ದ. ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದ್ದು, ವಿಜಯವಾಡ ರೈಲು ನಿಲ್ದಾಣದಲ್ಲಿ ಕಣ್ಣಾವಲು ಇರಿಸಿದ್ದ ಪೊಲೀಸರು, ನಾಗಸೌಮ್ಯಳನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. ಬಳಿಕ ಬಶೀರ್‌ನನ್ನೂ ಬಂಧಿಸಲಾಗಿದೆ.

Related Articles

Back to top button
error: Content is protected !!