ಇತರೆ
ತೀರ್ಥಹಳ್ಳಿ- ಮಾಲೂರು: ಸೀರೆ ಬಾಕ್ಸ್ ಪೋಲ್ಡಿಂಗ್, ಸೀರೆ ಕುಚ್ಚು ಕೌಶಲ್ಯ ತರಬೇತಿ
Views: 23
ಕನ್ನಡ ಕರಾವಳಿ ಸುದ್ದಿ: ಟಿ .ಎಂ.ಜಿ.ಸುನಿಧಿ ಫೌಂಡೇಶನ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಪ್ರಾಯೋಜಕತ್ವದಲ್ಲಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಆಯೋಜನೆಯಲ್ಲಿ ಮಾಲೂರು ಕೃಷಿ ಪತ್ತಿನ ಸಹಕಾರ ಸಂಘ ಮಾಲೂರು ಸ್ಥಳ ಸಹಕಾರದಲ್ಲಿ 10 ದಿನಗಳ ಕಾಲ ಸಾರಿ ಬಾಕ್ಸ್ ಪೋಲ್ಡಿಂಗ್ ಮತ್ತು ವಿವಿಧ ಕೌಶಲ್ಯ ತರಬೇತಿಯ ಉದ್ಘಾಟನೆ ಮಾಲೂರು ಕೃಷಿ ಪತ್ತಿನ ಸಹಕಾರ ಸಂಘ ಮಾಲೂರು ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಮೃದ್ಧಿ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ನಾಗರತ್ನ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬಿವಿಟಿ ಮಣಿಪಾಲದ ರಾಘವೇಂದ್ರ ಆಚಾರ್ಯ, ತರಬೇತುದಾರೆ ಜ್ಯೋತಿ ಶೆಟ್ಟಿ , ಯಶಸ್ವಿ ಉದ್ಯಮಿ ಸಂಧ್ಯಾ,ಸಂಜೀವಿನಿ ಖಂಜಾಂಜಿ ಉಮಾ, ತರಬೇತಿ ಆಯೋಜಕರು ಮತ್ತು ಸಂಜೀವಿನಿ ಡಿ.ಆರ್ ಪಿ ನಾಗವೇಣಿ, ಆಶಾ, ಎಂ.ಬಿ.ಕೆ ಸಮತಾ ಉಪಸ್ಥಿತರಿದ್ದು ಶುಭಹಾರೈಸಿದರು. 32 ಜನ ತರಬೇತಿ ಪ್ರಯೋಜನ ಪಡೆಯಲು ಹಾಜರಿದ್ದರು.






