ಇತರೆ

ಹಳಿ ತಪ್ಪಿ ಬಿದ್ದ ಎಕ್ಸ್ ಪ್ರೆಸ್ ರೈಲು :ಐವರು ಪ್ರಯಾಣಿಕರು ದುರ್ಮರಣ

Views: 81

ಕನ್ನಡ ಕರಾವಳಿ ಸುದ್ದಿ: ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದ ಪರಿಣಾಮ ಭೀಕರ ದುರಂತ ಸಂಭವಿಸಿದ್ದು, ಐವರು ಮೃತಪಟ್ಟು, ನೂರಾರು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

14 ಬೋಗಿಗಳು ಹಳಿತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಳೆಯ ಮೂಲಸೌಕರ್ಯ ಮತ್ತು ಕಳಪೆ ನಿರ್ವಹಣೆಯು ಇಂತಹ ಅಪಘಾತಗಳಿಗೆ ಕಾರಣವೆಂದು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಸಮೀಪ ಈ ಘಟನೆ ನಡೆದಿದೆ. ಕರಾಚಿಯಿಂದ ಪೇಶಾವರಕ್ಕೆ ತೆರಳುತ್ತಿದ್ದ ‘ರೆಹಮಾನ್ ಬಾಬಾ ಎಕ್ಸ್‌ಪ್ರೆಸ್’ ಪ್ಯಾಸೆಂಜರ್ ರೈಲಿನ ಎಲ್ಲಾ 14 ಬೋಗಿಗಳು ಶೇರ್ ಶಾ ಸೇತುವೆಯ ಬಳಿ ಹಳಿತಪ್ಪಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಅಖಲಿಸಲಾಗಿದೆ.

Related Articles

Back to top button
error: Content is protected !!