ಯುವಜನ

ವಿದ್ಯಾರ್ಥಿಗಳ ಗಲಾಟೆ: ಸಹಪಾಠಿಯಿಂದಲೇ ಚಾಕು ಇರಿದು ಬಿಕಾಂ ವಿದ್ಯಾರ್ಥಿ ಹತ್ಯೆ

Views: 19

ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಕಾಂ ಓದುತ್ತಿದ್ದ 19 ವರ್ಷದ ಯೋಗೀಶ್ ಕೊಲೆಯಾದ ವಿದ್ಯಾರ್ಥಿ.

ಯೋಗೀಶ್ ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಜತೆಗೆ ಉತ್ತಮ ಡಾನ್ಸರ್ ಕೂಡ ಆಗಿದ್ದ. ಬುಧವಾರ ಎಂದಿನಂತೆ ಯೋಗೀಶ್‌ ಕಾಲೇಜಿಗೆ ಬಂದಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಯೋಗೀಶ್‌ಗೆ ಫೋನ್ ಮಾಡಿ, ಹೊರಗೆ ಬಂದು ಮಾತನಾಡುವಂತೆ ಹೇಳಿದ್ದಾನೆ. ಕಾಲೇಜಿನ ಹಿಂಭಾಗದಲ್ಲಿರುವ ಜಿಮ್‌ವೊಂದರ ಬಳಿ ಯೋಗೀಶ್ ಬಂದಿದ್ದಾನೆ. ಅಲ್ಲಿ ಆತನೊಂದಿಗೆ ಮಾತನಾಡಲು ಏಳೆಂಟು ಮಂದಿ ಬಂದಿದ್ದರು. ಇದೇ ವೇಳೆ ಯೋಗೀಶ್ ಸ್ನೇಹಿತರು ಹಾಗೂ ಮತ್ತೊಂದು ಗುಂಪಿನ ನಡುವೆ ಯಾವುದೋ ವಿಚಾರಕ್ಕೆ ಏಕಾಏಕಿ ಗಲಾಟೆ ನಡೆದಿದೆ. ಗಲಾಟೆ ನಡೆಯುತ್ತಿದ್ದ ವೇಳೆ ಗುಂಪಿನಲ್ಲಿದ್ದ ಓರ್ವ ವಿದ್ಯಾರ್ಥಿ ಏಕಾಏಕಿ ಚಾಕು ತೆಗೆದು ಯೋಗೀಶ್ನ ಎದೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯೋಗೀಶ್‌ನನ್ನು ಸ್ನೇಹಿತರು ಬೈಕ್‌ನಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Related Articles

Back to top button
error: Content is protected !!