ರಾಜಕೀಯ
ನಾಲ್ಕು ಭಾರಿ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಬಿಜೆಪಿಗೆ ಸೇರ್ಪಡೆ
Views: 165
ಕನ್ನಡ ಕರಾವಳಿ ಸುದ್ದಿ :ವಂಡ್ಸೆ ಭಾಗದ ಪ್ರಬಲ ಕಾಂಗ್ರೆಸ್ ನಾಯಕರು, ಹಾಗೂ ನಾಲ್ಕು ಭಾರಿ ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ, ಪ್ರಸ್ತುತ ನಿರಾಮಯ ಸೊಸೈಟಿ ಅಧ್ಯಕ್ಷರಾಗಿರುವ ಉದಯ್ ಕುಮಾರ್ ಶೆಟ್ಟಿಯವರು ಶನಿವಾರ ಸಂಸದರಾದ ಬಿ.ವೈ ರಾಘವೇಂದ್ರ ರವರು ಹಾಗೂ ಶಾಸಕರಾದ ಗುರುರಾಜ್ ಗಂಟೆಹೊಳೆ ಯವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಚಿತ್ತೂರು ಶ್ರೀನಿವಾಸ ಕನ್ವನ್ಸನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಸಂಸದರು ಹಾಗೂ ಶಾಸಕರು ಪಕ್ಷದ ಧ್ವಜ ನೀಡುವುದರ ಮೂಲಕ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಅನಿತಾ ಆರ್. ಕೆ, ಬಿಜೆಪಿ ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ,ಪ್ರಿಯದರ್ಶಿನಿ ದೇವಾಡಿಗ, ಶಿವರಾಮ್ ಶೆಟ್ಟಿ, ದೀಪಕ್ ಶೆಟ್ಟಿ ವಂಡ್ಸೆ, ನಿರ್ಮಲ ಶೆಟ್ಟಿ ವಂಡ್ಸೆ, ರವಿ ಶೆಟ್ಟಿ, ಚಿತ್ತೂರು, ವೆಂಕಟೇಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.






