ಸಾಮಾಜಿಕ

ಲಂಡನ್‌ನಲ್ಲಿ ಮಕ್ಕಳ ವೈದ್ಯನಾಗಿದ್ದು ಮದುವೆಯಾಗಲು ಬರುತ್ತಿರುವುದಾಗಿ ನಂಬಿಸಿ ಮಹಿಳೆಗೆ 1.91 ಲಕ್ಷ ರೂ.ವಂಚನೆ

Views: 21

ಕನ್ನಡ ಕರಾವಳಿ ಸುದ್ದಿ: ನಾನು ಲಂಡನ್‌ನಲ್ಲಿ ಮಕ್ಕಳ ವೈದ್ಯನಾಗಿದ್ದು ಮದುವೆಯಾಗಲು ಭಾರತಕ್ಕೆ ಬರುತ್ತಿರುವುದಾಗಿ ನಂಬಿಸಿ ಮಹಿಳೆಯೋರ್ವರಿಗೆ 1.91 ಲಕ್ಷ ರೂ. ವಂಚಿಸಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

45 ವರ್ಷ ವಯಸ್ಸಿನ ಮಹಿಳೆ ಜೂನ್ ತಿಂಗಳಿನಲ್ಲಿ ಮ್ಯಾಟ್ರಿಮೊನಿ ಆ್ಯಪ್ ಒಂದನ್ನು ತನ್ನ ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿ ತನ್ನ ವಿವರಗಳನ್ನು ನಮೂದಿಸಿ ರಿಜಿಸ್ಟರ್ ಮಾಡಿಕೊಂಡಿದ್ದರು. ಸೆ.5 ರಂದು ಅಪರಿಚಿತ ವ್ಯಕ್ತಿ ಮಹಿಳೆಗೆ ಕರೆ ಮಾಡಿ ತಾನು ಡಾ| ಸುರೇಶ್ ಎಂದು ಪರಿಚಯಿಸಿಕೊಂಡ ಲಂಡನ್‌ನಲ್ಲಿ ಮಕ್ಕಳ ವೈದ್ಯನಾಗಿರುವುದಾಗಿ ತಿಳಿಸಿದ್ದಾನೆ. ಅನಂತರ ಮಹಿಳೆಗೆ ವಾಟ್ಸಾಪ್ ಕರೆ ಮಾಡಿದ್ದಾನೆ. ಇದನ್ನು ನಂಬಿದ ಮಹಿಳೆ ಆತನೊಂದಿಗೆ ವಾಟ್ಸಾಪ್ ಕಾಲ್‌ನಲ್ಲಿ ಮಾತನಾಡುತ್ತಿದ್ದರು. ಆತ ಲಂಡನ್ನಿನಿಂದ ಬಂದು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಸೆ.14ರಂದು ಲಂಡನ್‌ನಿಂದ ಬರುತ್ತಿರುವುದಾಗಿ ತಿಳಿಸಿದ್ದು, ಸೆ.15 ರಂದು ಮುಂಬಯಿ ಏರ್‌ಪೋರ್ಟ್‌ನಲ್ಲಿ ಹೆಲ್ತ್ ಚೆಕ್ ಅಪ್ ಮಾಡುವುದಾಗಿಯೂ ಇದಕ್ಕೆ ಇಂಡಿಯನ್ ಕರೆನ್ಸಿ ತನ್ನ ಬಳಿ ಇಲ್ಲವೆಂದು ತಿಳಿಸಿ ಮೊದಲಿಗೆ 42,500 ರೂ ಹಣವನ್ನು ಗೂಗಲ್ ಪೇ ಮಾಡುವಂತೆ ತಿಳಿಸಿದ್ದರಿಂದ ಮಹಿಳೆಯು ಆತನು ತಿಳಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು.

-ಅನಂತರ ಕಸ್ಟಮ್ಸ್ ಅಫೀಸರ್‌ ತನ್ನ ಲಗೇಜ್ ಹಾಗೂ ಫೋನ್ ನ್ನು ವಶಪಡಿಸಿಕೊಂಡಿದ್ದು ಅವರಿಗೆ 1,49,000 ಲಕ್ಷ ರೂ ನೀಡಬೇಕೆಂದು ತಿಳಿಸಿದ್ದರಿಂದ ಮಹಿಳೆ ಹಣ ವರ್ಗಾವಣೆ ಮಾಡಿದ್ದಾರೆ. ಅನಂತರ ಆತ 3 ಲಕ್ಷ ರೂ. ನೀಡಬೇಕೆಂದು ತಿಳಿಸಿದಾಗ ಮಹಿಳೆ ಅನುಮಾನಗೊಂಡರು.

,ಆರೋಪಿ ಹಂತ ಹಂತವಾಗಿ ಒಟ್ಟು 1,91,500 ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

Related Articles

Back to top button
error: Content is protected !!