ಧಾರ್ಮಿಕ

ಗಣೇಶ ಮೂರ್ತಿ ತರುವಾಗ ವಿದ್ಯುತ್ ತಂತಿ ಮೈಮೇಲೆ ಬಿದ್ದು ಯುವಕ ಸಾವು

Views: 21

ಕನ್ನಡ ಕರಾವಳಿ ಸುದ್ದಿ: ಹೈದರಬಾದ್‌ನಿಂದ ಲಾರಿಯಲ್ಲಿ ಗಣೇಶ ಮೂರ್ತಿ ತರುವ ವೇಳೆ ವಿದ್ಯುತ್ ವೈರ್‌ಗೆ ಗಣೇಶ ಮೂರ್ತಿ ತಾಗಿ ವೈ‌ರ್ ಕಟ್‌ಆಗಿ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿದ್ದಾನೆ.

ರಾಯಚೂರು ಜಿಲ್ಲೆಯ ಅತ್ತನೂರು ಬಳಿ ದುರಂತ ಸಂಭವಿಸಿದೆ. ಸಿರವಾರ ಪಟ್ಟಣದ ವಿದ್ಯಾನಗರ ನಿವಾಸಿ ಪ್ರೇಮ್ (26) ಮೃತ ಯುವಕ.

ಹೈದರಾಬಾದ್‌ನಿಂದ ಸಿರವಾರ ಪಟ್ಟಣಕ್ಕೆ ವಾಹನದಲ್ಲಿ ಗಣೇಶನ ಮೂರ್ತಿಯನ್ನು ತರಲಾಗುತ್ತಿತ್ತು. ಅತ್ತನೂರು ಗ್ರಾಮ ತಲುಪುತ್ತಿದ್ದಂತೆ ಮಾರ್ಗ ಮಧ್ಯೆ ಹಾದುಹೋಗಿದ್ದ ಮೇಲ್ಬಾಗದ ವಿದ್ಯುತ್ ಲೈನ್‌ಗೆ ಗಣೇಶ ವಿಗ್ರಹ ಸಿಲುಕಿಕೊಂಡಿದೆ. ಈ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ವಾಹನದಲ್ಲಿದ್ದ ಪ್ರೇಮ್ ಅವರ ಮೇಲೆ ಬಿದ್ದಿದೆ. ವಿದ್ಯುತ್ ಸ್ಪರ್ಶದಿಂದ ಗಂಭೀರವಾಗಿ ಗಾಯಗೊಂಡ ಪ್ರೇಮ್ ಅವರನ್ನು ತಕ್ಷಣವೇ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ, ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಸಿರವಾರ ಸಿಪಿಐ ಶಶಿಕಾಂತ ಎಂ.ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related Articles

Back to top button
error: Content is protected !!