ಕೈಲಾಶ ಯಾತ್ರೆಗೆ ತೆರಳಿ ಪ್ರವಾಹದಲ್ಲಿ ತಂದೆ ತಾಯಿ ಕಳೆದುಕೊಂಡ ಮಗಳ ಕಣ್ಣೀರು ಕಥೆ!
Views: 85
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ತನ್ವಿಯ ತಂದೆ ತಾಯಿ ತಂದೆ ವೆಂಕಟರಾಮ್, ತಾಯಿ ಅನಘ.. ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲೇ ಈ ಮುದ್ದಾದ ಕುಟುಂಬ ವಾಸವಿತ್ತು. ಇಬ್ಬರೂ ಇಂಜಿನಿಯರ್‌ಗಳಾಗಿದ್ದ ತಂದೆ ತಾಯಿ, ಮಗಳನ್ನ ಒಬ್ಬಳು ಸ್ಪೆಷಲೈಸ್ಟ್ ಡಾಕ್ಟರ್ ಮಾಡೋಕು ಅಂತಾ ತಂದೆ ತಾಯಿ ಕೂಡ ಸಾಕಷ್ಟು ಕಷ್ಟಪಟ್ಟಿದ್ದಾರೆ.ಆದರೆ ಆ ಕನಸು ನುಚ್ಚು ನೂರಾಗಿ ತನ್ವಿ ಒಂಟಿಯಾಗಿದ್ದಾಳೆ.
ಕಳೆದ ಆಗಸ್ಟ್ 30ನೇ ತಾರೀಖು ಮೆಡಿಕಲ್ ಪೋಸ್ಟ್ ಗ್ರಾಜುಯೇಷನ್ ಕೋರ್ಸ್‌ಗೆ ಅರ್ಹತೆ ಪಡೆಯಲು ನೀಟ್ ಪಿಜಿ ಎಕ್ಸಾಂ ನಡೆಸಲಾಗಿತ್ತು. ದೇಶಾದ್ಯಂತ ಎಲ್ಲಾ ಆಕಾಂಕ್ಷಿಗಳ ಹಾಗೆಯೇ, ಬೆಂಗಳೂರಿನ ತನ್ವಿ ಕೂಡ ಪರೀಕ್ಷೆ ಅಟೆಂಡ್ ಮಾಡಿದ್ದು, 3 ಗಂಟೆಗಳ ಕಾಲ ನಡೆದ ಪರೀಕ್ಷೆಯನ್ನು ತನ್ನಿ ಎದುರಿಸಿದ್ದಳು, ಬಟ್, ಮನಕಲಕುವ ವಿಷಯ ಏನ್ ಗೊತ್ತಾ? ಆ ಮೂರು ಗಂಟೆಗಳ ಪರೀಕ್ಷೆಯಲ್ಲಿ ತನ್ವಿ ಬರೋಬ್ಬರಿ ಒಂದೂವರೆ ಗಂಟೆ ಕಣ್ಣೀರು ಹಾಕ್ತಾನೆ ಇದ್ದಳಂತೆ
ತನ್ವಿಯ ತಂದೆ ತಾಯಿ ಏನಿದ್ರಲ್ಲ, ವೆಂಕಟ್‌ರಾಮ್ ಹಾಗೂ ಅನಘ ನೇಪಾಳದ ಮೂಲಕ ಕೈಲಾಶ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. 67 ಜನರ ತಂಡವನ್ನ ಕೈಲಾಶ ಯಾತ್ರೆಗೆ ಕೊಂಡೊಯ್ಯುವ ಜವಾಬ್ದಾರಿಯನ್ನ ರಿಚಾ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಹೊತ್ತಿತ್ತು. ಇಲ್ಲಿಂದ ನೇಪಾಳಕ್ಕೆ ಹೋಗಿ ಅಲ್ಲಿಂದ ಕೈಲಾಶ ಮಾನಸ ಸರೋವರಕ್ಕೆ ತೆರಳಬೇಕಿತ್ತು, ಆದ್ರೆ, ಆಗಸ್ಟ್ 26ನೇ ತಾರೀಖು, ನೇಪಾಳ ಟಿಬೆಲ್ ಬಾರ್ಡರ್ ನಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ತನ್ವಿಯ ತಂದೆ ತಾಯಿ ಮಗಳಿಗೆ ಸಂಪರ್ಕಕ್ಕೇ ಸಿಗುತ್ತಿಲ್ಲವಂತೆ
ಆಗಸ್ಟ್ 26ರ ಬೆಳಗ್ಗೆ 08.27ಕ್ಕೆ ಮಗಳ ಜೊತೆಗೆ ಮಾತನಾಡಿದ ತಂದೆ ತಾಯಿ ಮತ್ತೆ, ಕಾಂಟ್ಯಾಕ್ಟ್‌ಗೇ ಸಿಕ್ಕಿಲ್ಲವಂತೆ, ಅಲ್ಲಿಂದ ಇಲ್ಲಿವರೆಗೂ 12 ದಿನಗಳು ಕಳೆದರೂ ತನ್ನಿಗೆ ತಂದೆ ತಾಯಿಯ ಸುಳಿವೇ ಸಿಕ್ಕಿಲ್ಲವಂತೆ
ಅಪ್ಪ-ಅಮ್ಮ ಕಾಣೆಯಾಗಿದ್ದಾರೆ, ಅನ್ನೋದು ಗೊತ್ತಿರೋ ವಿಚಾರ, ಅಪ್ಪ-ಅಮ್ಮ ಬದುಕಿದ್ದಾರೆ ಅನ್ನೋದು ನಂಬಲಾಗದ ನಂಬಿಕೆ ಆದರೆ ಆ ನಂಬಿಕೆಯ ಮೇಲೆಯೇ ತನ್ವಿ ತನ್ನ ಪರೀಕ್ಷೆಯನ್ನು ಅಟೆಂಡ್ ಮಾಡಿದ್ದಳು, ಆದ್ರೆ, ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸಿದ್ದ ಅಪ್ಪ ಅಮ್ಮ ಜೊತೆಗಿಲ್ಲ ಅನ್ನೋದು ಗೊತ್ತಿದ್ರೂ ತನ್ನಿ ಪರೀಕ್ಷೆಗೆ ಹೋಗಿದ್ದು, ತನಗಾಗಿ ಅಲ್ಲ, ಪ್ರತೀ ಕ್ಷಣ, ಪ್ರತೀ ದಿನ ನನ್ನ ಮಗಳು ಡಾಕ್ಟರ್ ಆಗ್ತಾಳೆ ಅಂತಾ ಕನಸು ಕಟ್ಟಿದ್ದ ಅಪ್ಪನಿಗಾಗಿ ಅಂದ ಹಾಗೇ, ನೀಟ್ ಎಕ್ಸಾಂ ಸೆಂಟರ್‌ನಲ್ಲಿ ತನ್ವಿಯ ದುಃಖದ ಕಟ್ಟೆ ಇನ್ನಷ್ಟು ಜೋರಾಗಿ ಒಡೆಯಿತು.






