ಇತರೆ

Views: 0

ಲೇಖಕ ಕಾಳಾವರ ಗಣಪಯ್ಯ ಶೆಟ್ಟಿಗಾರ್ ವಿರಚಿತ ಪುರಾಣ ಲೋಕದ ಶಾಪಗಳು ಕೃತಿ ಬಿಡುಗಡೆ

ಕನ್ನಡ ಕರಾವಳಿ ಸುದ್ದಿ: ಖ್ಯಾತ ಲೇಖಕ ಕಾಳಾವರ ಗಣಪಯ್ಯ ಶೆಟ್ಟಿಗಾರ್ ವಿರಚಿತ ಪುರಾಣ ಲೋಕದ ಶಾಪಗಳು ಕೃತಿ ಬಿಡುಗಡೆ ಸಮಾರಂಭ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ 40ನೇ ವಾರ್ಷಿಕ ಮಹಾಸಭೆ  ಕೋಟೇಶ್ವರದ ಶ್ರೀ ಕಮಲಮ್ಮ ಸರ್ವೋತ್ತಮ ಬುಧ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.

ವಿಜಯ ಕರ್ನಾಟಕ ರೆಸ್ಪಾನ್ಸ್ ಹೆಡ್ ರವಿ.ಎಸ್.ಶೆಟ್ಟಿಗಾರ್ ಕೃತಿ ಬಿಡುಗಡೆಗೊಳಿಸಿದರು.

ಅನ್ಯಾಯ, ಅನಾಚಾರ ಮತ್ತು ಅನೇಕ ತರಹದ ಪಾಪ ಕೃತ್ಯಗಳನ್ನೆಸಗುತ್ತಾ ಭೂಲೋಕದಲ್ಲಿ ಶಾಪಕ್ಕೆ ಗುರಿಯಾದ ಮಾನವರು ಪುಣ್ಯಕರವಾದ ಪುರಾಣದ ಕಥೆಗಳನ್ನು ಓದುವುದರಿಂದ ಶಾಪದಿಂದ ಮುಕ್ತಿ ಹೊಂದಿ ಸದ್ಗತಿಯನ್ನು ಪಡೆಯಬಹುದಾಗಿದೆ.

ಲೇಖಕರಾದ ಗಣಪಯ್ಯ ಶೆಟ್ಟಿಗಾರ ಅವರು “ನಿನಗಾಗಿಯೂ ಬದುಕು”, “ಪರರಿಗಾಗಿಯೂ ಬದುಕು”, “ತ್ಯಾಗವೇ ಶ್ರೇಷ್ಠವಾದ ಯೋಗ”, “ಗುರು-ಅರ್ಥ ಮತ್ತು ವಿಸ್ತಾರ”,”ಮಾತೆ ಮಮತೆಯ ಮೂರ್ತಿ”, “ದಾಂಪತ್ಯ ಜೀವನದಲ್ಲಿ ಹೆಣ್ಣಿನ ಹಿರಿಮೆ”, ಎಂಬ ಲೇಖನವನ್ನು ಪ್ರಕಟಿಸಿದ್ದು, ನಂತರ “ನಾವು ದೇವರನ್ನು ನಂಬುವ” “ಉಪಕಥೆಗಳು” ಹಾಗೂ “ಪುರಾಣ ಲೋಕದ ಶಾಪಗಳು” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಆಸ್ತಿಕರ ಮನಗೆದ್ದಿದ್ದಾರೆ.

ಸಂಘದ ಅಧ್ಯಕ್ಷರಾದ ಡಾ.ಚಂದ್ರಶೇಖರ್ ವಿ.ಎಸ್.ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭಾ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಕಾರ್ಯದರ್ಶಿ ಡಾ. ವೆಂಕಟ್ರಾಯ ಶೆಟ್ಟಿಗಾರ್ ಪದ್ಮಶಾಲಿ ಸಮಾಜ ಸಂಘ ಕೋಟೇಶ್ವರದ ಕಟ್ಟಡ ಸಮಿತಿ ಅಧ್ಯಕ್ಷರಾದ ಡಾ. ಬಸವರಾಜ್ ಶೆಟ್ಟಿಗಾರ್ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಉಪಾಧ್ಯಕ್ಷರಾದ ರತ್ನಾಕರ ಇಂದ್ರಾಳಿ, ವಿಜಯ ಕರ್ನಾಟಕ ರೆಸ್ಪಾನ್ಸ್ ಹೆಡ್ ರವಿ.ಎಸ್.ಶೆಟ್ಟಿಗಾರ್, ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಮಾಲತಿ ಶೆಟ್ಟಿಗಾರ್, ಪದ್ಮಶಾಲಿ ಸಮಾಜ ಸಂಘ ಕೋಟೇಶ್ವರ ಮಹಿಳಾ ಸಂಚಾಲಕಿ ರಾಜೀವಿ ಶೆಟ್ಟಿಗಾ‌ರ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಸಂಘದ ಗೌರವಾಧ್ಯಕ್ಷ ಜನಾರ್ಧನ್ ಶೆಟ್ಟಿಗಾರ್ ವಕ್ವಾಡಿ, ಡಾ. ಶಿವಪ್ರಸಾದ್ ಕೆ ಉಡುಪಿ ಉಪಸ್ಥಿತರಿದ್ದರು.

 

 

Related Articles

Back to top button
error: Content is protected !!