ಕರಡು ಮತದಾರರ ಪಟ್ಟಿ ಪ್ರಕಟ: ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಚೆಕ್ ಮಾಡಿ
Views: 67
ಕನ್ನಡ ಕರಾವಳಿ ಸುದ್ದಿ:ರಾಜ್ಯದಲ್ಲಿ SIR ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು, ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಇದರ ಪ್ರಯುಕ್ತ ಮುಖ್ಯ ಚುನಾವಣಾಧಿಕಾರಿ ಅನ್ಸುಕುಮಾರ್ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸುವ ನಿರೀಕ್ಷೆಯಿದೆ.
SIR ಪ್ರಕ್ರಿಯೆಯಲ್ಲಿ ನೋ ಮ್ಯಾಪಿಂಗ್ ಮತ್ತು ಅನಮಾಲೀಸ್ ( ದಾಖಲೆ ಸರಿ ಇಲ್ಲದ) ಎಂದು ಗುರುತಿಸಲಾದ ಮತದಾರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.
ಬೆಂಗಳೂರು ವ್ಯಾಪ್ತಿಯಲ್ಲಿ ನೋಟಿಸ್: 24,05,990
ಡ್ರಾಫ್ಟ್ ವೋಟರ್ ಲಿಸ್ಟ್‌ನಿಂದ 1.07 ಕೋಟಿ ಜನ ಹೊರಗುಳಿಯುವ ಸಾಧ್ಯತೆ?
ಸದ್ಯದ SIR ಲೆಕ್ಕಾಚಾರದ ಪ್ರಕಾರ ಸುಮಾರು 1.07 ಕೋಟಿ ಮತದಾರರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸದಿರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಇಂತಹ ಮತದಾರರು ತಮ್ಮ ಅರ್ಹತೆ ಮತ್ತು ದಾಖಲೆಗಳ ಆಧಾರದ ಮೇಲೆ ಅಗತ್ಯ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಮನವಿ ಮಾಡಿಕೊಳ್ಳಬಹುದು.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ?
ಹೀಗೆ ಚೆಕ್ ಮಾಡಿ
1. Voter Service Portal ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಿಮ್ಮ EPIC Number ಅಥವಾ ಅಗತ್ಯ ವೈಯಕ್ತಿಕ ವಿವರಗಳನ್ನು ನಮೂದಿಸಿ.
3. Electoral Roll | Voter List 2 ಹೆಸರು ಇದೆಯೇ ಎಂದು ಪರಿಶೀಲಿಸಿ.
ಹೆಸರು ಅಥವಾ ವಿವರಗಳಲ್ಲಿ ಸಮಸ್ಯೆ ಕಂಡುಬಂದರೆ, ಅನ್ವಯಿಸುವ ಚುನಾವಣಾ ಅರ್ಜಿ ನಮೂನೆಯ ಮೂಲಕ ತಿದ್ದುಪಡಿ ಅಥವಾ ಸೇರ್ಪಡೆ ಪ್ರಕ್ರಿಯೆ ಕೈಗೊಳ್ಳಬಹುದು.
ನೋಟೀಸ್ ಪ್ರಕ್ರಿಯೆ ಹೇಗೆ ನಡೆಯಲಿದೆ?
SIR ಪ್ರಕ್ರಿಯೆಯಡಿ ಗುರುತಿಸಲಾದ ನೋ ಮ್ಯಾಪಿಂಗ್ ಮತ್ತು ಅನಮಾಲೀಸ್‌ಗಳಿಗೆ ನೋಟಿಸ್ ವಿತರಣೆ ನಡೆಯಲಿದೆ.
ಪ್ರಮುಖ ದಿನಾಂಕಗಳು
ಆಗಸ್ಟ್ 24: ಡ್ರಾಫ್ಟ್ ಎಲೆಕ್ಟೋಲ್ ರೋಲ್ ಬಿಡುಗಡೆ
ಆಗಸ್ಟ್ 31: ನೋಟಿಸ್ ಪ್ರಕ್ರಿಯೆ ಆರಂಭ
ಆಗಸ್ಟ್ 31ರಿಂದ: BLOಗಳು ಮನೆಗಳಿಗೆ ಭೇಟಿ ನೀಡಿ ನೋಟಿಸ್ ವಿತರಣೆ
ನೋಟಿಸ್ ಪಡೆದ ಮತದಾರರು ಅಗತ್ಯ ದಾಖಲೆಗಳೊಂದಿಗೆ AERO (Assistant Electoral Registration Officer) ಹಾಜರಾಗಬೇಕಾಗಬಹುದು.






