ಕ್ರೀಡೆ

ಬಾರ್ಕೂರು ರಂಗನಕೇರಿ ಶೆಟ್ಟಿಗಾರ ಇಂಡಸ್ಟ್ರೀಸ್ 21ನೇ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಕೆಸರು ಗದ್ದೆ ಕ್ರೀಡಾಕೂಟ

Views: 0

ಕನ್ನಡ ಕರಾವಳಿ ಸುದ್ದಿ: ಬಾರ್ಕೂರು  ರಂಗನಕೇರಿ ಶೆಟ್ಟಿಗಾರ ಇಂಡಸ್ಟ್ರೀಸ್ 21ನೇ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಕೂಡ್ಲಿ ಉಡುಪರ ಮನೆಯ ವಠಾರದ ಗದ್ದೆಯಲ್ಲಿ ವಿವಿಧ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಕೆಸರಿನಲ್ಲಿ ಬಿಳುತ್ತಾ.. ಏಳುತ್ತಾ.. ಹಾರುತ್ತ.. ಕುಣಿಯುತ್ತ ಕೆಲ ಕಾಲ ಮಿಂದೆದ್ದರು‌. ಯುವಕ ಯುವತಿಯರ ಕೆಸರು ಗದ್ದೆ ಕ್ರೀಟಾಕೂಡ ಒಂದು ಕಡೆಯಾದ್ರೆ ಇಲ್ಲಿದೆ ಆಗಮಿಸಿದ ಪುಟ್ಟಪುಟ್ಟ ಮಕ್ಕಳಂತ್ತು ಕೆಸರಿನಲ್ಲಿ ಸಖತ್ ಎಂಜಾಯ್ ಮಾಡಿದ್ರು. ಕೆಸರು ಗದ್ದೆಯ ಆಟ ಎಲ್ಲರ ಕಣ್ಮನ ಸೆಳೆಯಿತು.

ಪುರುಷರು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಣ್ಣಿನ ಮಕ್ಕಳ ಆಟ ನೋಡುಗರಿಗೆ ಮನೋರಂಜನೆಯ ರಸದೌತಣವನ್ನ ನೀಡಿತ್ತು.

ಬಾರ್ಕೂರು ಯಡ್ತಾಡಿ, ಕಚ್ಚೂರು, ಹನೇಹಳ್ಳಿ, ಕೂರಾಡಿ ನಡೂರು, ರಂಗನಕೇರಿ ವ್ಯಾಪ್ತಿಯಲ್ಲಿ ನಡೆದ ಕೆಸರು ಗೆದ್ದೆ ಕ್ರೀಡಾಕೂಟದಲ್ಲಿ ಕೆಸರು ಗದ್ದೆ ಓಟ, ಹಿಮ್ಮುಖ ಓಟ, ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ, ಗೂಟ ಸುತ್ತುವ ಆಟ, ಸಂಗೀತ ಸ್ಪರ್ಧೆ ವಿವಿಧ ಗ್ರಾಮೀಣ ಕೂಟವನ್ನು   ಹಮ್ಮಿಕೊಳ್ಳಲಾಗಿತ್ತು.

ಕೆಸರು ಗದ್ದೆ ಕೋಟವನ್ನು ಕೂಡ್ಲಿ ಶ್ರೀನಿವಾಸ್ ಉಡುಪರು ಬತ್ತ ತುಂಬಿದ ಕಳಿಸಿಗೆಯಲ್ಲಿ ತೆಂಗಿನ ಹೂ ಅರಳಿಸುವ ಮೂಲಕ ಉದ್ಘಾಟಿಸಿದರು.

ಉದ್ಯಮಿ ಬಾರ್ಕೂರು ಶಾಂತರಾಮ ಶೆಟ್ಟಿ  ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆ ಯುವ ಜನಾಂಗದವರಿಗೆ ಅತ್ಯಗತ್ಯ. ಆಧುನಿಕ ಡಿಜಿಟಲ್ ಯುಗದಲ್ಲಿ ನಶಿಸಿ ಹೋಗುತ್ತಿರುವ ಕ್ರೀಡೆಗಳು ಇಂತಹ ಗ್ರಾಮೀಣ ಕ್ರೀಡೆಗಳು ಮುಂದಿನ ಪೀಳಿಗೆ ಮಾದರಿಯಾಗಲಿ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಸುಧಾಕರ್ ರಾವ್ ಮಾತನಾಡಿ, ಕಳೆದ 20 ವರ್ಷಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಬಹಳ ಶಿಸ್ತು ಬದ್ಧವಾಗಿ ಆಚರಿಸಿಕೊಂಡು ಬಂದಿದ್ದಾರೆ. ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಶುಭ ಹಾರೈಸಿದರು.

ಕೆನರಾ ಬ್ಯಾಂಕ್ ಡಿಜಿಎಂ ರಾಮ ನಾಯ್ಕ್ ಮಾತನಾಡಿ, ಮಣ್ಣಿನಲ್ಲಿ ಆಯುರ್ವೇದಿಕ್ ಗುಣವಿರುವುದರಿಂದ ಇಂತಹ ಕ್ರೀಡೆ ಚಿಕಿತ್ಸೆಗೆ ಸಹಕಾರಿ ಇದ್ದಂತೆ ಎಂದರು.

ವೇದಿಕೆಯಲ್ಲಿ ಉದ್ಯಮಿ ಚಂದ್ರಶೇಖರ್ ಶೆಟ್ಟಿ, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಆಚಾರ್ಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರ ಶೆಟ್ಟಿ, ಗುರಿಕಾರ ಅಣ್ಣಪ್ಪ ನಾಯಕ್, ಹನೆಹಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಉದಯ್ ಕುಮಾರ್ ಶೆಟ್ಟಿ, ಅಶೋಕ್ ಪೂಜಾರಿ, ಹರೀಶ್, ಚಂದ್ರಶೇಖರ, ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್ ಸ್ವಾಗತಿಸಿ, ಮಾತನಾಡಿದ ಅವರು, ಕೃಷಿ ಸಂಸ್ಕೃತಿ ಕಣ್ಮರೆಯಾಗಬಾರದು ಎಂಬ ಕಾಳಜಿಯಿಂದ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು, ಯುವ ಜನತೆಯಲ್ಲಿ ಒಗ್ಗಟ್ಟು, ನಮ್ಮ ಗ್ರಾಮೀಣ ಸಂಸ್ಕೃತಿ ಮುಂದಿನ ಪೀಳಿಗೆಗೆ ಪರಿಚಯ ಮಾಡುವ ಗ್ರಾಮೀಣ ಕ್ರೀಡೆಗಳನ್ನು ಮರುಜನ್ಮ ನೀಡುವ ಉದ್ದೇಶದಿಂದ ಇಂಥ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕ್ರೀಡೆಗೆ ಸಹಕರಿಸಿದವರನ್ನು ಗೌರವಿಸಿದರು.

ಗೌರಿ ಪೂಜಾರಿ ಪ್ರಾರ್ಥಿಸಿದರು.ಕುಂಬ್ರಗೋಡು ಶಾಲಾ ಮುಖ್ಯ ಶಿಕ್ಷಕ ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದ್ದರು. ಮೊಗವೀರ ಯುವ ಸಂಘಟನೆಯ ಸತೀಶ್ ಅಮೀನ್ ವಂದಿಸಿದರು.

Related Articles

Back to top button
error: Content is protected !!