ಆರ್ಥಿಕ
ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ಮಾಡುವ ನೆಪದಲ್ಲಿ ಕುಂದಾಪುರದ ಮೊಳಹಳ್ಳಿ ಮಹಿಳೆಗೆ ಲಕ್ಷಾಂತರ ರೂ.ವಂಚನೆ
Views: 45
ಕನ್ನಡ ಕರಾವಳಿ ಸುದ್ದಿ: ಕ್ರೆಡಿಟ್ ಕಾರ್ಡ್ ಅಪ್‌ಡೇಟ್ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಆನ್‌ಲೈನ್‌ನಲ್ಲಿ ಲಿಂಕ್ ಕಳುಹಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಕುಂದಾಪುರ ತಾಲೂಕಿನ ಮೊಳಹಳ್ಳಿ ನಿವಾಸಿ ಐಶ್ವರ್ಯ ಎಂಬುವರಿಗೆ ಜುಲೈ 27ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಅವರ ಕ್ರೆಡಿಟ್ ಕಾರ್ಡ್‌ನ ಪ್ರೊಟೆಕ್ಷನ್ ಪ್ಲಾನ್ ಅಪ್‌ಡೇಟ್ ಮಾಡುವಂತೆ ತಿಳಿಸಿದ್ದಾನೆ. ಬಳಿಕ ಗೂಗಲ್ ಮೂಲಕ ಕಳುಹಿಸಲಾದ icici.helpsuseronline ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಹೇಳಿದ್ದಾನೆ. ದೂರುದಾರರು ಆ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಅವರ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು ₹1,99,696.06 ಹಣ ಅಪರಿಚಿತ ಖಾತೆಗೆ ವರ್ಗಾವಣೆಯಾಗಿದೆ. ಈ ಕುರಿತು ಐಶ್ವರ್ಯ ನೀಡಿದ ದೂರಿನ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






