ಕರಾವಳಿ

ಕೈ ಮಗ್ಗ ನೇಕಾರ ಸಂಜೀವ ಶೆಟ್ಟಿಗಾರ ಅವರಿಗೆ ರಾಜ್ಯ ಪ್ರಶಸ್ತಿ

Views: 1

ಉಡುಪಿ ಸೀರೆ ನೇಕಾರ ಪರಿಣಿತ ಸಂಜೀವ್ ಶೆಟ್ಟಿಗಾರ ಅವರಿಗೆ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹತ್ತಿ ಬಟ್ಟೆ ಸೀರೆ ನೆಯ್ಗೆ ಸ್ಪರ್ಧೆಯಲ್ಲಿ ಪದ್ಮಾವಿಠಲ ಗಂಜಿ ಅವರಿಗೆ ಪ್ರಥಮ ಸ್ಥಾನ ಹಾಗೂ ಸಂಜೀವ ಶೆಟ್ಟಿಗಾರ್ ಅವರಿಗೆ ರಾಜ್ಯಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿದೆ.

ತಾಳಿಪಾಡಿ ನೇಕಾರ ಸಂಘದ ಸದಸ್ಯರಾಗಿರುವ 74 ವಯಸ್ಸಿನ ಸಂಜೀವ್ ಶೆಟ್ಟಿಗಾರ್ ಇವರು 80 ಕೌಂಟ್ ಸಹಜ ಸೀರೆ ನೆಯ್ದ ಮೊದಲಿಗರಾಗಿದ್ದಾರೆ.

ಕದಿಕೆ ಟ್ರಸ್ಟ್ 20 ವರ್ಷದ ನಂತರ ಗೋಪಿನಾಥ್ ಶೆಟ್ಟಿಗಾರರ ನೆರವಿನಲ್ಲಿ ಈ ಸೀರೆಯನ್ನು ಮೊದಲು ನೆಯ್ದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೈಮಗ್ಗ ನೇಕಾರಿಕೆಯಲ್ಲಿ ಪರಿಣಿತಿ ಹೊಂದಿರುವ ಸಂಜೀವ್ ಶೆಟ್ಟಿಗಾರ ಅವರು ಎರಡು ಹಾಸುಗಳನ್ನು ಒಂದೇ ಕೈಯಿಂದ ಜೋಡಿಸುವ ಕುಶಲತೆ ಹೊಂದಿದ್ದಾರೆ. 74ರ ಹರೆಯದಲ್ಲೂ ಸಾಂಪ್ರದಾಯಿಕ ಮತ್ತು ಆಧುನಿಕ ಎರಡು ಶೈಲಿಯ ಸೀರೆಗಳಿಗೆ  ಬಣ್ಣ ಹೊಂದಿಸಿ ನೆಯಬಲ್ಲರು. ಒಂದೇ ಹಾಸಿನಲ್ಲಿಯೂ ವಿವಿಧ ವಿನ್ಯಾಸದ ಸೀರೆ ನೆಯಬಲ್ಲರು.

ಕದಿಗೆ ಟ್ರಸ್ಟ್ ಆರಂಭಿಸಿದ ಉಡುಪಿ ಸೀರೆ ಉಳಿಸಿ ಅಭಿಯಾನದ ನಂತರ ತಾಳಿಪಾಡಿ ನೇಕಾರರ ಸಂಘವನ್ನು ಸೇರಿದ ಸಂಜೀವ ಶೆಟ್ಟಿಗಾರ ಅವರು ಅನೇಕ ವರ್ಷಗಳ ಕಾಲ ಉಡುಪಿ ನೇಕಾರರ ಸಂಘದಲ್ಲಿ ಸೇವೆ ಸಲ್ಲಿಸಿದ್ದರು ಎಂದು ಕದಿಕೆ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Back to top button