ಜನಮನ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ವಾಸಸ್ಥಳ ಬದಲಿಸಿದರೆ SIR ನಮೂನೆ ಇಲ್ಲ!

Views: 63

ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ ಐಆರ್) ಪ್ರಕ್ರಿಯೆ ಸಂಬಂಧ ಇರುವ ಗೊಂದಲಗಳ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಸುಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಮತದಾರರು ವಾಸಸ್ಥಳ ಬದಲಿಸಿದ್ದಲ್ಲಿ ಅಂತವರಿಗೆ ಗಣತಿ ನಮೂನೆ ನೀಡಲಾಗುವುದಿಲ್ಲ. ಅಂತಹ ಮತದಾರರು ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 8 ಭರ್ತಿ ಮಾಡಿ ವಾಸಸ್ಥಳ ಬದಲಾವಣೆ ಮಾಡಿಕೊಳ್ಳಬೇಕು. ಆಗ ಅವರ ಹೆಸರು ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ತಿಳಿಸಿದರು. (ಶೇ.99.96) ಗಣತಿ ನಮೂನೆ ವಿತರಿಸಲಾಗಿದ್ದು, ಉಳಿದ ಗಣತಿ ನಮೂನೆಗಳ ವಿತರಣೆ ಎರಡು ದಿನದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಅನುಕುಮಾರ್ ತಿಳಿಸಿದರು.

ಈಗಾಗಲೇ ನಮೂನೆ ಪಡೆದಿರುವ ಮತದಾರರು ಮಾಹಿತಿ ಭರ್ತಿ ಮಾಡಿ ಸಹಿ ಮಾಡಿ ಆ.8ರೊಳಗೆ ಬಿಎಲ್‌ಒಗೆ ವಾಪಸ್ ಕೊಡಬೇಕು. ಕೊಡದಿದ್ದಲ್ಲಿ ಅವರ ಹೆಸರು ಮತದಾರರ ಪಟ್ಟಿಯಿಂದ ಕೈ ಬಿಡಲಾಗುವುದು. ಹೀಗಾಗಿ ವಿಳಂಬ ಮಾಡಬೇಡಿ ಎಂದು ಅನ್ಸುಕುಮಾ‌ರ್ ಅವರು ಮನವಿ ಮಾಡಿದರು.

Related Articles

Back to top button
error: Content is protected !!