ಆರೋಗ್ಯ

ಕಿಡ್ನಿ ದಾನ ಮಾಡಿ ಸೊಸೆಯ ಜೀವ ಉಳಿಸಿದ 70 ವರ್ಷದ ಅತ್ತೆ

Views: 0

ಎಪ್ಪತ್ತು ವರ್ಷದ ಅತ್ತೆ ತನ್ನ ಕಿಡ್ನಿಯನ್ನು ದಾನ ಮಾಡಿ ಸೊಸೆಯ ಜೀವ ಉಳಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಕಳೆದ ಒಂದು ವರ್ಷದಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಇತ್ತೀಚಿಗೆ ಆರೋಗ್ಯದ ಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ಮೂತ್ರಪಿಂಡ ಕಸಿ ಮಾಡದಿದ್ದರೆ ಅದು ಜೀವಕ್ಕೆ ಅಪಾಯ ಎದುರಾಗುವ ಸಂಭವ ಇದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಈ ವೇಳೆ ಅತ್ತೆ ತನ್ನ ಕಿಡ್ನಿಯನ್ನು ದಾನ ಮಾಡಲು ಮುಂದಾಗಿದ್ದಾರೆ. ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸಿ ಕಿಡ್ನಿ ದಾನಕ್ಕೆ ಸಾಧ್ಯವಿದೆ ಎಂದು ಹೇಳಿದ್ದಾರೆ.

ಕೂಡಲೇ ಅತ್ತೆ ಒಪ್ಪಿಗೆ ನೀಡಿ ತನ್ನ ಕಿಡ್ನಿಯನ್ನು ಸೊಸೆಗೆ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಕಸಿ ಮಾಡಲಾಯಿತು. ನಂತರ ಇಬ್ಬರ ಆರೋಗ್ಯದಲ್ಲಿ ಚೇತರಿಕೆಯಾಗಿದೆ.

Related Articles

Back to top button