ಆರೋಗ್ಯ
ಕ್ಯುಡೆಂಗಾ ಹೆಸರಿನ ಡೆಂಗ್ಯೂ ಜ್ವರಕ್ಕೆ ಲಸಿಕೆ ಲಭ್ಯ!
Views: 13
ಕನ್ನಡ ಕರಾವಳಿ ಸುದ್ದಿ: ಭಾರತದಲ್ಲಿ ಇದುವರೆಗೆ ಡೆಂಗ್ಯೂ ಜ್ವರಕ್ಕೆ ಲಸಿಕೆ ಲಭ್ಯವಿರಲಿಲ್ಲ. ಬದಲಿಗೆ ಡೆಂಗ್ಯೂ ಬಾರದಂತೆ ವಹಿಸಬೇಕಾದ ಕೆಲ ಮುನ್ನೆಚ್ಚರಿಕಾ ಕ್ರಮಗಳು ಮಾತ್ರ ಇದ್ದವು. ಇದೀಗ ಕ್ಯುಡೆಂಗಾ ಹೆಸರಿನ ಡೆಂಗ್ಯೂ ಜ್ವರಕ್ಕೆ ಲಸಿಕೆ ತಯಾರಿಸಲಾಗಿದ್ದು, ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಈ ಲಸಿಕೆ ಮಾರಾಟಕ್ಕೆ ಒಪ್ಪಿಗೆ ನೀಡಿದೆ
ಈ ಲಸಿಕೆಯನ್ನು 4 ರಿಂದ 40 ವರ್ಷದೊಳಗಿನವರಿಗೆ ನೀಡಬಹುದು. ಮುಂಜಾಗ್ರತಾ ಕ್ರಮವಾಗಿ ನೀಡುವ ಈ ಲಸಿಕೆಯನ್ನು 3 ತಿಂಗಳ ಅಂತರದಲ್ಲಿ 2 ಡೋಸ್‌ಗಳಾಗಿ, ಪ್ರತಿ ಬಾರಿ 0.5ml ಪ್ರಮಾಣದಲ್ಲಿ ನೀಡಬೇಕಾಗುತ್ತದೆ.
ಈ ಲಸಿಕೆಯನ್ನು ಡೆಂಗ್ಯೂ ಸೋಂಕಿಗೆ ಒಳಗಾದವರಿಗೆ ಮಾತ್ರವಲ್ಲದೇ, ಇದುವರೆಗೆ ಡೆಂಗ್ಯೂ ಸೋಂಕು ತಗಲದಿರುವವರಿಗೂ ನೀಡಬಹುದಾಗಿದೆ. ಆದರೆ ಲಸಿಕೆ ಬೆಲೆ ಎಷ್ಟಿರಬೇಕು ಎನ್ನುವುದು ಇನ್ನಷ್ಟೇ ನಿಗದಿಯಾಗಬೇಕಿದೆ.






