ಸಾಂಸ್ಕೃತಿಕ

ಬಾಲಿವುಡ್‌ ನಟಿ ನೀನಾ ಗುಪ್ತಾ ಕಲರ್‌ ಫುಲ್‌ ಜರ್ನಿ…ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ತಾಯಿಯಾದ ನಟಿ!

Views: 53

ಕನ್ನಡ ಕರಾವಳಿ ಸುದ್ದಿ : ಬಾಲಿವುಡ್‌ ನಟಿ ನೀನಾ ಗುಪ್ತಾ  ಚಿತ್ರರಂಗದಲ್ಲಿ ದಶಕಗಳ ಕಾಲ ಸಕ್ರಿಯರಾಗಿದ್ದುಕೊಂಡು ಸಾಧನೆ ಮಾಡಿರುವ ಈ ನಟಿಯ ಬದುಕಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಪ್ರಸ್ತುತ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿರುವ ಇವರ ಜೀವನದ ಆ ಕರಾಳ ಮತ್ತು ಸ್ಫೂರ್ತಿದಾಯಕ ದಿನಗಳು ಇಲ್ಲಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ವಿವಿಯನ್ ರಿಚರ್ಡ್ಸ್ ಹಾಗೂ ನೀನಾ ಗುಪ್ತಾ ಅವರ ಲವ್ ಸ್ಟೋರಿ ಒಂದಾನೊಂದು ಕಾಲದಲ್ಲಿ ಸಖತ್ ಸೌಂಡ್ ಮಾಡಿತ್ತು. ಜೈಪುರ ಮಹಾರಾಣಿ ಆಯೋಜಿಸಿದ್ದ ಭೋಜನ ಕೂಟವೊಂದರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಈ ಜೋಡಿ, ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬಿದ್ದಿತ್ತು. ವಿವಿಯನ್ ಈಗಾಗಲೇ ಮದುವೆಯಾಗಿದ್ದರೂ, ಇವರಿಬ್ಬರು ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ವಾಸಿಸಲು ಆರಂಭಿಸಿದರು.

ಈ ಸಂಬಂಧದ ನಡುವೆ ನೀನಾ ಗುಪ್ತಾ ಗರ್ಭಿಣಿಯಾದಾಗ ಸಮಾಜದಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಮದುವೆಯಾಗದೇ ತಾಯಿಯಾಗುತ್ತಿರುವುದನ್ನು ಕಂಡು, ಅದೆಷ್ಟೋ ಜನರು ಮಗುವನ್ನು ಗರ್ಭಪಾತ ಮಾಡಿಸುವಂತೆ ಬಿಟ್ಟಿ ಸಲಹೆಗಳನ್ನು ನೀಡಿದ್ದರಂತೆ. ಆದರೆ, ಸಮಾಜದ ಸಾವಿರಾರು ನಿಂದನೆಗಳನ್ನು ಲೆಕ್ಕಿಸದ ನೀನಾ, ಸಿಂಗಲ್ ಮದರ್ ಆಗಿ ಮಗುವನ್ನು ಜಗತ್ತಿಗೆ ತರಲು ಗಟ್ಟಿ ನಿರ್ಧಾರ ಮಾಡಿದರು.

ನೀನಾ ಗುಪ್ತಾ ಅವರ ಗರ್ಭಧಾರಣೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ವೈದ್ಯರು ಸಿ-ಸೆಕ್ಷನ್ ಹೆರಿಗೆಯಾಗಬೇಕೆಂದು ಸೂಚಿಸಿದ್ದರು. ಆದರೆ, ಆ ಸಮಯದಲ್ಲಿ ಸಿ-ಸೆಕ್ಷನ್ ಹೆರಿಗೆಗೆ ಸುಮಾರು 10,000 ರೂಪಾಯಿಗಳ ಅವಶ್ಯಕತೆಯಿತ್ತು. ಆದರೆ, ನೀನಾ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 2,000 ರೂಪಾಯಿ ಮಾತ್ರ ಇತ್ತಂತೆ!

ಹೆರಿಗೆಯ ಕೊನೆಯ ಕ್ಷಣದಲ್ಲಿ ಪವಾಡ ಎಂಬಂತೆ ಅವರಿಗೆ 10,000 ರೂಪಾಯಿ ಹಣ ಹೊಂದಾಣಿಕೆಯಾಯಿತು. ಆ ಹಣದಿಂದಲೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಮಗುವೇ ಇಂದಿನ ಖ್ಯಾತ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ.

ಒಂಟಿ ತಾಯಿಯಾಗಿ ಮಗುವನ್ನು ಬೆಳೆಸುವುದು ಸುಲಭದ ಮಾತಲ್ಲ. ಜೀವನದಲ್ಲಿ ಸಾಲು ಸಾಲು ಸಂಕಷ್ಟಗಳನ್ನು ಎದುರಿಸಬೇಕಾಯಿತು. ಮಗುವಿಗೆ ತಾಯಿ ಮತ್ತು ತಂದೆ ಇಬ್ಬರ ಪ್ರೀತಿಯೂ ಸಮಾನವಾಗಿ ಸಿಗಬೇಕು. ಅಂದು ನನಗೆ ಎದುರಾದ ಪರಿಸ್ಥಿತಿ ಇಂದು ಗೊತ್ತಿದ್ದಿದ್ದರೆ, ನಾನು ಎಂದಿಗೂ ಒಂಟಿಯಾಗಿ ಮಗುವಿಗೆ ಜನ್ಮ ನೀಡುತ್ತಿರಲಿಲ್ಲ ಎಂದು ನೀನಾ ಗುಪ್ತಾ ಸಂದರ್ಶನವೊಂದರಲ್ಲಿ ಬೇಸರ ಹಂಚಿಕೊಂಡಿದ್ದಾರೆ.

ವಿವಿಯನ್ ರಿಚರ್ಡ್ಸ್ ಜೊತೆಗಿನ ಪ್ರೀತಿ ಅಧೂರಿಯಾಗಿಯೇ ಉಳಿದ ನಂತರ, ಮಗಳನ್ನು ಒಂಟಿಯಾಗಿ ಎದೆಯೆತ್ತರಕ್ಕೆ ಬೆಳೆಸಿದ ನೀನಾ ಗುಪ್ತಾ, ತಮ್ಮ ವೃತ್ತಿಜೀವನದಲ್ಲೂ ಕಂಬ್ಯಾಕ್ ಮಾಡಿ ಗೆದ್ದರು. ತದನಂತರ, 2008 ರಲ್ಲಿ ಅವರು ವಿವೇಕ್ ಮೆಹ್ರಾ ಅವರನ್ನು ವಿವಾಹವಾಗಿ ಹೊಸ ಜೀವನ ಆರಂಭಿಸಿದರು. ಕಷ್ಟಗಳ ಸುಳಿಯಲ್ಲೂ ಜಗ್ಗದೆ ನಿಂತ ನೀನಾ ಗುಪ್ತಾ ಅವರ ಈ ಜೀವನದ ಕಥೆ ನಿಜಕ್ಕೂ ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ.

Related Articles

Back to top button
error: Content is protected !!