ಸಾಂಸ್ಕೃತಿಕ

ಬಿಗ್ ಬಾಸ್’ ಖ್ಯಾತಿಯ ನಟಿಗೆ ಮಧ್ಯರಾತ್ರಿ ಯುವಕ ಅಸಭ್ಯ ವರ್ತನೆ: ಸೂಕ್ತ ಕ್ರಮಕ್ಕೆ ನಟಿ ಮನವಿ

Views: 57

ಕನ್ನಡ ಕರಾವಳಿ ಸುದ್ದಿ: ಬಿಗ್ ಬಾಸ್’ ಖ್ಯಾತಿಯ ನಟಿ ದಿವ್ಯಾ ಸುರೇಶ್ ಅವರಿಗೆ ಬೆಂಗಳೂರಿನಲ್ಲಿ ಮಧ್ಯರಾತ್ರಿ ನಡೆದ ಕಿರುಕುಳದ ಘಟನೆ ಆತಂಕಕ್ಕೆ ಕಾರಣವಾಗಿದೆ.

ಅಪರಿಚಿತ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿ, ತನ್ನನ್ನು ಹಿಂಬಾಲಿಸಿದ್ದಾನೆ ಎಂದು ನಟಿ ಆರೋಪಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕಾರಿನತ್ತ ತೆರಳುತ್ತಿದ್ದ ವೇಳೆ ಹಿಂಬಾಲಿಸಿದ ಅಪರಿಚಿತ ಯುವಕ ದಿವ್ಯಾ ಸುರೇಶ್ ಅವರ ಹೇಳಿಕೆಯ ಪ್ರಕಾರ, ಭಾನುವಾರ ರಾತ್ರಿ ಸುಮಾರು 11.30 ಗಂಟೆ ವೇಳೆಗೆ ತಮ್ಮ ಸಂಬಂಧಿಯೊಂದಿಗೆ ಕಾರಿನತ್ತ ನಡೆದು ಹೋಗುತ್ತಿದ್ದಾಗ ಅಪರಿಚಿತ ಯುವಕನೊಬ್ಬ ಅವರ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಆತನ ವರ್ತನೆಯಿಂದ ಆತಂಕಗೊಂಡ ದಿವ್ಯಾ ಮತ್ತು ಅವರ ಸಂಬಂಧಿ ತಕ್ಷಣವೇ ಕಾರಿನತ್ತ ಓಡಿ ಹೋಗಿದ್ದಾರೆ.

ತಮ್ಮ ಸುರಕ್ಷತೆಯ ದೃಷ್ಟಿಯಿಂದ ಇಬ್ಬರೂ ಕಾರಿನೊಳಗೆ ಪ್ರವೇಶಿಸಿ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದಾರೆ. ಆದರೆ, ಆರೋಪಿತ ಯುವಕ ಕಾರಿನ ಹೊರಗಡೆಯೇ ನಿಂತು ಅಸಭ್ಯ ಸನ್ನೆಗಳು ಹಾಗೂ ಕಿರುಕುಳದ ವರ್ತನೆಯನ್ನು ಮುಂದುವರಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಈ ಘಟನೆ ತಮ್ಮಲ್ಲಿ ತೀವ್ರ ಭಯ ಮತ್ತು ಆತಂಕ ಉಂಟುಮಾಡಿದೆ ಎಂದು ದಿವ್ಯಾ ಸುರೇಶ್ ತಿಳಿಸಿದ್ದಾರೆ.

ಘಟನೆಯ ಬಳಿಕ ದಿವ್ಯಾ ಸುರೇಶ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸಂಪೂರ್ಣ ಘಟನೆಯನ್ನು ವಿವರಿಸಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Related Articles

Back to top button
error: Content is protected !!