ಸಾಂಸ್ಕೃತಿಕ

ಮಾಜಿ ಮುಖ್ಯಮಂತ್ರಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಟಗರು’ ಸರೋಜ ಖ್ಯಾತಿಯ ಕನ್ನಡದ ನಟಿ!

Views: 341

ಕನ್ನಡ ಕರಾವಳಿ ಸುದ್ದಿ: ಸ್ಯಾಂಡಲ್ವುಡ್ ನಟ ಶಿವರಾಜಕುಮಾರ್ ನಟನೆಯ ‘ಟಗರು’ ಚಿತ್ರದಲ್ಲಿ ಸರೋಜಾ ಪಾತ್ರದ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟಿ ತ್ರಿವೇಣಿ ರಾವ್ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ನಟಿ, ತ್ರಿಪುರ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಬಿಜೆಪಿ ಸಂಸದರಾಗಿರುವ 54 ವರ್ಷದ ಬಿಪ್ಲಬ್ ಕುಮಾರ್ ದೇವ್ ಜೊತೆ ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ.

ದೆಹಲಿಯಲ್ಲಿ ನಡೆದ ಆಪ್ತರ ಸಮ್ಮುಖದ ಖಾಸಗಿ ಸಮಾರಂಭದಲ್ಲಿ ಈ ಇಬ್ಬರು ಸಪ್ತಪದಿ ತುಳಿದಿದ್ದಾರೆ. ಸದ್ಯ ಇವರ ವಿವಾಹದ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಚಿತ್ರರಂಗ ಹಾಗೂ ರಾಜಕೀಯ ವಲಯದ ಗಣ್ಯರು ಮತ್ತು ಅಭಿಮಾನಿಗಳು ಈ ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಸ್ಟೇಟ್ ಬ್ಯಾಂಕ್ ಅಧಿಕಾರಿಯಾಗಿದ್ದ ನೀತಿ ದೇವ್ ಜೊತೆ ಬಿಪ್ಲಬ್ ದೇವ್ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ದಂಪತಿ ಡಿವೋರ್ಸ್‌ ಪಡೆದಿದ್ದರು. ಇದೀಗ ಕನ್ನಡದ ನಟಿಯನ್ನು ಬಿಪ್ಲಬ್ ದೇವ್ ವರಿಸಿದ್ದಾರೆ. ಜೂನ್ 24ರಂದು ಅಗರ್ತಲಾದ ಹೊಟೇಲ್ ಪೋಲೋ ಟವರ್ಸ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು ರಾಜಕೀಯ ಹಾಗೂ ಸಿನಿ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

Related Articles

Back to top button
error: Content is protected !!