ಸಾಂಸ್ಕೃತಿಕ

ಪ್ರಸಿದ್ಧ ಕಿರುತೆರೆ ನಟಿ ಎಂದು ಸಾಮಾಜಿಕ ಮಾಧ್ಯಮಗಳ ಶ್ರೀಮಂತ ಪುರುಷರನ್ನೇ ಟಾರ್ಗೆಟ್ ಮಾಡಿ ವಂಚನೆ:ನಟಿ ವನಿತಾ ಬಂಧನ

Views: 37

ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಮಂತರನ್ನು ಸಂಪರ್ಕಿಸಿ, ತಾನು ಕಿರುತೆರೆ ನಟಿ ಎಂದು ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡುತ್ತಿದ್ದ ನಟಿ ವನಿತಾಳನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಇಂದು (ಜೂನ್ 22) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ವನಿತಾ ಅತ್ಯಂತ ಚಾಲಾಕಿ ಹಾಗೂ ವ್ಯವಸ್ಥಿತವಾಗಿ ವಂಚನೆ ಜಾಲ ಹೆಣೆಯುತ್ತಿದ್ದಳು. ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ತಾನು ಪ್ರಸಿದ್ಧ ಕಿರುತೆರೆ ನಟಿ ಎಂದು ಬಿಂಬಿಸಿಕೊಳ್ಳುತ್ತಿದ್ದಳು. ಆನ್‌ಲೈನ್‌ನಲ್ಲಿ ಹಾಯ್, ಹಲೋ ಎನ್ನುತ್ತಾ ಕೇವಲ ಪ್ರೊಫೈಲ್ ನೋಡಿ ಶ್ರೀಮಂತ ಪುರುಷರನ್ನೇ ಟಾರ್ಗೆಟ್ ಮಾಡಿ ಸ್ನೇಹ ಬೆಳೆಸುತ್ತಿದ್ದಳು. ನಿರಂತರವಾಗಿ ಮಾತನಾಡಿ ಎದುರಿದ್ದವರ ನಂಬಿಕೆ ಗಳಿಸುವುದು ಈಕೆಯ ಮೊದಲ ತಂತ್ರವಾಗಿತ್ತು.

ಪೂರ್ಣ ನಂಬಿಕೆ ಬಂದ ಬಳಿಕ ತನ್ನ ಅಸಲಿ ಮುಖವಾಡ ಕಳಚುತ್ತಿದ್ದಳು. “ನಾನು ಸದ್ಯ ತೀವ್ರ ಕಷ್ಟದಲ್ಲಿದ್ದೇನೆ. ನನ್ನ ಚಿನ್ನದ ಆಭರಣಗಳನ್ನು ಹಣಕಾಸು ಸಂಸ್ಥೆಯಲ್ಲಿ ಅಡವಿಟ್ಟಿದ್ದೇನೆ. ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣದ ಅವಶ್ಯಕತೆಯಿದೆ. ಕೇವಲ ಎರಡರಿಂದ ಮೂರು ದಿನಗಳಲ್ಲಿ ಸಾಲದ ರೂಪದಲ್ಲಿ ಪಡೆದ ಹಣವನ್ನು ವಾಪಸ್ ನೀಡುತ್ತೇನೆ” ಎಂದು ಕಣ್ಣೀರಿಟ್ಟು ನಂಬಿಸುತ್ತಿದ್ದಳು. ನಟಿಯ ಮಾತನ್ನು ನಿಜವೆಂದು ನಂಬಿ ನೂರಾರು ಜನ ಲಕ್ಷಾಂತರ ರೂಪಾಯಿಗಳನ್ನು ನೀಡುತ್ತಿದ್ದರು.

ಬಹಳ ಜಾಣತನದಿಂದ ವರ್ತಿಸುತ್ತಿದ್ದವನಿತಾ, ಆನ್‌ಲೈನ್ ಯುಪಿಐ (UPI) ವರ್ಗಾವಣೆ ಮೂಲಕ ಹಣ ಪಡೆಯುತ್ತಿರಲಿಲ್ಲ. ಬದಲಿಗೆ ತಾನು ಹೇಳಿದ ಜಾಗಕ್ಕೆ ನಗದು ) ಹಣ ತರುವಂತೆ ಪೀಡಿಸುತ್ತಿದ್ದಳು. ಪೊಲೀಸರಿಗೆ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ ನಗರದ ಯಾವ ಭಾಗದಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳು ಇಲ್ಲವೋ, ಅಂತಹ ನಿರ್ಜನ ಪ್ರದೇಶಗಳನ್ನು ಹುಡುಕಿ ಅಲ್ಲಿಗೆ ಹಣ ನೀಡುವವರನ್ನು ಕರೆಸಿಕೊಳ್ಳುತ್ತಿದ್ದಳು. ಒಮ್ಮೆ ಕೈಗೆ ನಗದು ಹಣ ಸಿಗುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಿದ್ದಳು.

Related Articles

Back to top button
error: Content is protected !!