ಶಿಕ್ಷಣ

ಬ್ರಹ್ಮಾವರ: ಫಾರ್ಚೂನ್ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

Views: 27

ಕನ್ನಡ ಕರಾವಳಿ ಸುದ್ದಿ: ರಾಜೀವ ಗಾಂಧಿ ವಿಶ್ವವಿದ್ಯಾನಿಲಯ ಹೆಲ್ತ್ ಸೈನ್ಸ್ ಕರ್ನಾಟಕ ಮತ್ತು ಮುನಿಯಾಲು ಇನ್ಸ್ಟಿಟ್ಯೂಟ್ ಆಫ್ ಯೋಗ ಮತ್ತು ನ್ಯಾಚುರೋಪತಿ ಮಣಿಪಾಲ, ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಸ್ ಇದರ ಫಾರ್ಚೂನ್ ಕಾಲೇಜ್ ಆಫ್ ನರ್ಸಿಂಗ್ ಬ್ರಹ್ಮಾವರ ಮಾಬು ಕಳ ಇವರ ಆಶ್ರಯದಲ್ಲಿ 12ನೇ “ವಿಶ್ವ ಯೋಗ ದಿನಾಚರಣೆ- 26” ಜೂನ್ 21ರಂದು ಮಾಬುಕಳ ಕಾಲೇಜಿನ ಅಡಿಟೋರಿಯಂ ನಲ್ಲಿ ನಡೆಯಿತು. 

ಜೂನ್ 12ರಿಂದ ಆರಂಭಗೊಂಡ ಒಟ್ಟು ಹತ್ತು ದಿನಗಳ ಯೋಗ ಕಾರ್ಯಕ್ರಮದಲ್ಲಿ ಇಂದು ನಡೆದ ಯೋಗ ದಿನಾಚರಣೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಸ್ಮಿತಾ ಮೋಲ್ ಯೋಗದ ಬಗ್ಗೆ ಮಾತನಾಡಿ, ದೇಹ ಮನಸ್ಸು ಬುದ್ಧಿಯನ್ನು ಕೇಂದ್ರೀಕರಿಸುವುದೇ ಯೋಗ. ಮಾನಸಿಕ, ಸ್ವಾಸ್ಥ್ಯ, ಬುದ್ಧಿಯ ಪ್ರಕರತೆ, ಅಧ್ಯಾತ್ಮಿಕ ಪ್ರಕರತೆಗೂ ದಾರಿ ತೋರಿ ಸುಂದರ ಬದುಕು ರೂಪಿಸಲು ಯೋಗಾಭ್ಯಾಸ ಉನ್ನತ ಮಾರ್ಗವಾಗಿದೆ ಎಂದರು. 

ಮುನಿಯಾಲು ಇನ್ಸ್ಟಿಟ್ಯೂಟ್ ಆಫ್ ಯೋಗ ಮತ್ತು ನ್ಯಾಚುರೋಪತಿ ಮಣಿಪಾಲ ಇದರ ಯೋಗ ತರಬೇತುದಾರರಾದ ಕೃತಿಕಾ ಮತ್ತು ಗೀತಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ, ಯೋಗ ಕೇವಲ ದೈಹಿಕ ವ್ಯಾಯಾಮವಲ್ಲ ವಿದ್ಯಾರ್ಥಿಗಳ ದೈಹಿಕ ಮಾನಸಿಕ ಭಾವನಾತ್ಮಕ ಬೆಳವಣಿಗೆಗೆ ಸಹಕಾರಿಯಾಗಿ ಏಕಾಗ್ರತೆ ಹೆಚ್ಚಿಸಿ ಪರೀಕ್ಷೆಯ ಒತ್ತಡ ಕಡಿಮೆ ಮಾಡಿ ಶಿಸ್ತನ್ನು ಬೆಳೆಸುತ್ತದೆ ಎಂದರು. 

ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕ ಪವನ್ ಕುಮಾರ್ ಉಪಸ್ಥಿತರಿದ್ದರು. 

ದ್ವಿತೀಯ ವರ್ಷದ ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಮತಾ ಸ್ವಾಗತಿಸಿದರು. ಸೆರೆನಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಪೂಜಾರಿ ವಂದಿಸಿದರು.

Related Articles

Back to top button
error: Content is protected !!