ಕರಾವಳಿ
ಉಡುಪಿ ಜಿಲ್ಲೆಯಾದ್ಯಂತ ಭಾರೀ ಬಿರುಗಾಳಿ ಬೀಸುವ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Views: 0
ಉಡುಪಿ ಜಿಲ್ಲೆಯಾದ್ಯಂತ ಆಗಸ್ಟ್ 3 ಮತ್ತು 4ರಂದು ಹಲವು ಸ್ಥಳಗಳಲ್ಲಿ ಭಾರೀ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬೀಸುವ ಬಿರುಗಾಳಿಯಿಂದ ಸಾರ್ವಜನಿಕರು ಸಮುದ್ರ, ನದಿ ತೀರ ಪ್ರದೇಶ, ಹಳ್ಳ ಕೊಳ್ಳಗಳಲ್ಲಿ ಇಳಿಯುವುದನ್ನು ನಿಷೇಧಿಸಿದೆ. ಮತ್ತು ಅಪಾಯಕಾರಿ ಕಟ್ಟಡ, ಮರ ,ಕಂಬಗಳ ಕೆಳಗೆ ಅಥವಾ ಹತ್ತಿರದಲ್ಲಿ ನಿಲ್ಲದೆ ಎಚ್ಚರಿಕೆಯಿಂದ ಇರಬೇಕುಎಂದು ಸಾರ್ವಜನಿಕರಿಗೆ ಉಡುಪಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ