ಕರಾವಳಿ

ಅಗಸ್ಟ್ ನಲ್ಲಿ ಮಳೆ ಕಡಿಮೆ: ಹವಾಮಾನ ಇಲಾಖೆ ಮುನ್ಸೂಚನೆ

Views: 1

ರಾಜ್ಯದಲ್ಲಿ ಪ್ರತಿವರ್ಷ ಜೂನ್ ನಲ್ಲಿ ಆರಂಭವಾಗುತ್ತಿದ್ದಂತೆ ಮುಂಗಾರು ಪ್ರವೇಶಿಸಿ ಮಳೆ ಜೋರಾಗಿರುತ್ತದೆ.ಈ ಬಾರಿ ಮುಂಗಾರು ತಡವಾಗಿ ಕಾಲಿಟ್ಟಿದ್ದರಿಂದ ವಿವಿಧ ಜಿಲ್ಲೆಗಳಲ್ಲಿ ಸಮ ಪ್ರಮಾಣದ ಮಳೆಯಾಗದೆ ಕೃಷಿ ಕಾರ್ಯಗಳಿಗೆ ತೊಡಕಾಗಿದೆ.

ಜುಲೈನಲ್ಲಿ ವಾಡಿಕೆಯಂತೆ ಅಧಿಕ ಮಳೆಯಾಗಿದ್ದು,ಅಗಸ್ಟ್ ತಿಂಗಳು ವಾಡಿಕೆಯಂತೆ ಕಡಿಮೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಗಸ್ಟ್ ತಿಂಗಳಲ್ಲಿ ತರಕಾರಿ, ಹಣ್ಣು, ರಾಗಿ, ಭತ್ತ ,ಜೋಳ ಬೆಳೆಯುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕರ್ನಾಟಕದಲ್ಲಿ ಅಗಸ್ಟ್ ನಲ್ಲಿ ಕಡಿಮೆಯಾಗುವ ಮಳೆ ಶೇ. 50ರಷ್ಟು ಸಾಧ್ಯತೆಗಳಿವೆ. ಇದುವರೆಗೆ ರಾಜ್ಯದಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ಪ್ರಮಾಣ ಕಡಿಮೆ ಎಂದು ರಾಜ್ಯ ಹವಾಮಾನ ಇಲಾಖೆಯ ಎ.ಪ್ರಸಾದ್ ತಿಳಿಸಿದ್ದಾರೆ.

ಜೂನ್ ನಲ್ಲಿ ಮಳೆ ಕೊರತೆ ಅಧಿಕವಾಗಿತ್ತು. ಆದರೆ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಗಾಳಿ ದಿಕ್ಕಿನ ಬದಲಾವಣೆಗೆ ವಲಯವು ಅನೇಕ ದಿನ 20, 17 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಹೋಗಿತ್ತು .ಪಕ್ಷಿಮ ದಿಕ್ಕಿನಿಂದ ಬೀಸಿದ ಗಾಳಿ ಸಹಿತ ವಿವಿಧ ಹವಾಮಾನ ಬದಲಾವಣೆಯಿಂದಾಗಿ ಜುಲೈ ತಿಂಗಳಲ್ಲಿ ಉತ್ತರ ಒಳನಾಡು, ಮಧ್ಯ ಭಾರತದಲ್ಲಿ ಉತ್ತಮ ಮಳೆಯಾಗಿದೆ.

Related Articles

Back to top button
error: Content is protected !!