ಸಾಂಸ್ಕೃತಿಕ

ಸೆ. 15,16 :ದುಬೈಯಲ್ಲಿ ಸೈಮಾ ಅವಾರ್ಡ್ಸ್ ಸಂಭ್ರಮ ಕಾರ್ಯಕ್ರಮ

Views: 0

ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಸಿನಿಮಾರಂಗದ ಪ್ರತಿಷ್ಠಿತ ಪ್ರಶಸ್ತಿ ಕಾರ್ಯಕ್ರಮ ಈ ಬಾರಿ ಸೆಪ್ಟೆಂಬರ್ 15 ಮತ್ತು 16ರಂದು ದುಬೈಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಪ್ರತಿ ವರ್ಷ ಭಾರತದ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ವಿವಿಧ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಈ ಬಾರಿ ಕನ್ನಡದ ಕೆಜಿಎಫ್ ಚಾಪ್ಟರ್- 2, ಕಾಂತಾರ, ಲವ್ ಮ್ಯಾಕ್ವೆಲ್-2, ವಿಕ್ರಾಂತ ದ್ರೋಣ, 777ಚಾರ್ಲಿ ಚಿತ್ರಗಳು ಪ್ರಶಸ್ತಿ ಸುತ್ತಿಗೆ ನಾಮ ನಿರ್ದೇಶನಗೊಂಡಿದೆ.

ತೆಲುಗಿನ ಆರ್ ಆರ್ ಆರ್ ಸೀತಾರಾಮ ತಮಿಳು ಸಿನಿಮಾ ವಿಭಾಗದಲ್ಲಿ ಪೊನ್ನಿಯನ್ ಸೆಲ್ವನ್-1 ರಾಕೆಟ್ರಿ ಮಲಯಾಳಂ ಭೀಷ್ಮಪರ್ವ, ಹೃದಯಂ ಸಿನಿಮಾಗಳು ಪ್ರಶಸ್ತಿ ಸುತ್ತಿನಲ್ಲಿದೆ.

ಕನ್ನಡದಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಿನ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದೆ.

Related Articles

Back to top button
error: Content is protected !!