ಸಾಂಸ್ಕೃತಿಕ

ಕುಂದಾಪುರ ರೋಟರಿ ಸನ್ ರೈಸ್ ಪದಪ್ರಧಾನ ಸಮಾರಂಭ

Views: 2

ಕುಂದಾಪುರ: 2023-24 ನೇ ಸಾಲಿನ ಕುಂದಾಪುರ ರೋಟರಿ ಸನ್‌ರೈಸ್‌ನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಕುಂದಾಪುರದ ಹೋಟೆಲ್ ಹರಿಪ್ರಸಾದ್ ಅಕ್ಷತಾ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು.

ಗೌರವಾನ್ವಿತ ಪೂರ್ವ ಜಿಲ್ಲಾ ಗವರ್ನರ್ ರೋ. ಎಂ.ಪಿ.ಎಚ್.ಎಫ್. ಅಭಿನಂದನ ಎ. ಶೆಟ್ಟಿಯವರು ನೂತನ ಅಧ್ಯಕ್ಷ ರೋ. ನಾಗರಾಜ ನಾಯ್ಕ್ರ ಅವರಿಗೆ ಅಧಿಕಾರ ಹಸ್ತಾಂತರ ನೀಡಿ ಶುಭ ಕೋರಿದರು.

ಸಹಾಯಕ ಗವರ್ನರ್ ಡಾ| ಸಂದೀಪ ಶೆಟ್ಟಿ, ವಲಯ ಸೇನಾನಿ ಡಾ| ಉತ್ತಮ ಕುಮಾರ ಶೆಟ್ಟಿ ನೂತನ ತಂಡಕ್ಕೆ ಅಭಿನಂದಿಸಿದರು. ನಿಕಟಪೂರ್ವ ಅಧ್ಯಕ್ಷ ಬಿ.ಎಂ. ಚಂದ್ರಶೇಖರ, ಕಾರ್ಯದರ್ಶಿ ನವೀನ ಡಿಸೋಜ, ನೂತನ ಕಾರ್ಯದರ್ಶಿ ಪ್ರಶಾಂತ್ ಹವಾಲ್ದಾರ್ ಇತರ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು, ಜಿಲ್ಲಾ ರೋಟರಿ ಪದಾಧಿಕಾರಿಗಳು, ಅಹ್ವಾನಿತರು, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Back to top button
error: Content is protected !!