ಸಾಂಸ್ಕೃತಿಕ

ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ

Views: 0

ಕುಂದಾಪುರ: ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ಅಡಿಯಲ್ಲಿ ಸೀನಿಯರ್ ಚೆಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲೇಜಿನ್ ಹಾಗೂ ರೋಟರಿ ಕುಂದಾಪುರ ಸನ್‌ರೈಸ್, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳ ಕಚೇರಿ. ಓಅಆ ಮತ್ತು ಕ್ಷೇಮ ಕೇಂದ್ರ, ಸರಕಾರಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇವರ ಜಂಟಿ ಸಹಯೋಗದಲ್ಲಿ ಕರ್ನಾಟಕ ಸರಕಾರಿ ಸಾರಿಗೆ ಸಂಸ್ಥೆ ಕುಂದಾಪುರ ಘಟಕದ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕ್ಷಯರೋಗದ ಚಿಕಿತ್ಸೆ ಹಾಗೂ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಯಿತು.

ಸೀನಿಯರ್ ಚೆಂಬರ್ ಅಧ್ಯಕ್ಷರಾದ ಶಿವಾನಂದ ಎಂ.ಪಿ., ರೋಟರಿ ಅಧ್ಯಕ್ಷರಾದ ನಾಗರಾಜ ನಾಯ್ಕ್, ಹುಸೇನ್ ಹೈಕಾಡಿ, ಮಂಜುನಾಥ್ ಕಾಮತ್, ಕೆ.ಎಚ್. ಚಂದ್ರಶೇಖರ, ನವೀನ ಡಿಸೋಜ, ಭಾಸ್ಕರ ಪೂಜಾರಿ, ಗಣೇಶ ಬೆಟ್ಟಿನ್, ಚಂದ್ರಶೇಖರ ಸೇರೆಗಾರ್, ಶಿಬಿರದ ಸಂಪನ್ಮೂಲ ವ್ಯಕ್ತಿಯವರಾದ ಡಾ| ಅವಿನಾಶ ಶೆಟ್ಟಿ, ಕ್ಷಯರೋಗ ನಿರ್ಮೂಲನ ಸಂಯೋಜಕ ಗುರುರಾಜ್ ಹಾಗೂ ಅವರ ಸಿಬ್ಬಂದಿ ಮತ್ತು ಸಾರಿಗೆ ಸಂಸ್ಥೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button
error: Content is protected !!