ಅಗಸ್ಟ್ 5,6ಮತ್ತು 7 : ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ‘ಕೈಮಗ್ಗ ಸೀರೆಗಳ ಉತ್ಸವ

Views: 4
‘ಉಡುಪಿ: ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇದರ ಆಶ್ರಯದಲ್ಲಿ ಮತ್ತು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ(ರಿ) ಬೆಂಗಳೂರು ಹಾಗು ಉಡುಪಿ, ತಾಳಿಪಾಡಿ, ಶಿವಳ್ಳಿ, ಬ್ರಹ್ಮಾವರ, ಪಡುಪಣಂಬೂರು, ಮಂಗಳೂರು, ಬಸ್ರೂರು ಮತ್ತು ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ‘ಕೈಮಗ್ಗ ಸೀರೆಗಳ ಉತ್ಸವ’ ಕಾರ್ಯಕ್ರಮ ಇದೇ ಬರುವ ಆಗಸ್ಟ್ 5, 6 ಮತ್ತು 7 ರಂದು ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಜರಗಿಸುವುದಾಗಿ ನಿರ್ಧರಿಸಲಾಗಿದೆ.
ನಮ್ಮ ಕುಲ ಕಸುಬಿನ ಉಳಿವಿಗಾಗಿ ಮುಂದಿನ ಪೀಳಿಗೆಗೆ ಆಧುನಿಕ ತಂತ್ರಜ್ಞಾನದ ಸೌಲಭ್ಯದೊಂದಿಗೆ ನಮ್ಮ ಕುಲಕಸುಬನ್ನು ದಾಟಿಸುವ ಜವಬ್ದಾರಿ ನಮ್ಮದಾಗಿದೆ.
ಈ ಬಗ್ಗೆ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿ, ಸರಕಾರದ ನೆರವಿನೊಂದಿಗೆ ಯೋಜನೆಗಳನ್ನು ಈಗಾಗಲೇ ಹಮ್ಮಿಕೊಂಡಿದೆ.
‘ಕೈಮಗ್ಗ ಸೀರೆಗಳ ಉತ್ಸವ’ ಕಾರ್ಯಕ್ರಮಗಳು
ಅಗಸ್ಟ್ 5 2023, ಶನಿವಾರ ಅಪರಾಹ್ನ 2.30 ರಿಂದ ಅಗಸ್ಟ್ 5 2023, ಶನಿವಾರ ಅಪರಾಹ್ನ 2.30 ಗಂಟೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಆದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ರವರು ಕೈಮಗ್ಗ ಸೀರೆಗಳ ಉತ್ಸವ ಮೂರು ದಿನಗಳ ಕಾರ್ಯಕ್ರಮಾವಳಿಗಳಿಗೆ ಚಾಲನೆ ನೀಡಲಿದ್ದಾರೆ
‘ಕೈಮಗ್ಗದ ನೇಯ್ಗೆ ಅಂದು-ಇಂದು-ಮುಂದು’ ವಿಚಾರ ಸಂಕಿರಣ ಕಾರ್ಯಕ್ರಮ
ಕೈಮಗ್ಗ ನೇಕಾರಿಕೆಯ ಭವಿಷ್ಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಚಿಂತನ ಮಂಥನ ನಡೆಯಲಿದೆ. ಈ ವಿಚಾರ ಸಂಕಿರಣದಲ್ಲಿ ಪದ್ಮಶಾಲಿ ಕೂಡುಕಟ್ಟಿನ 16 ದೇವಸ್ಥಾನಗಳ ಅಧ್ಯಕ್ಷರು ಮತ್ತು ಮೊಕ್ತೇಸರರು ಹಾಗೂ ಕರಾವಳಿಯ ಎಂಟು ಪ್ರಾಥಮಿಕ ನೇಕಾರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೆ ಸಮುದಾಯದ ಗಣ್ಯರುಗಳು ಸೇರಿ ಸುಮಾರು 300ಕ್ಕೂ ಹೆಚ್ಚು ವಿಶೇಷ ಆಹ್ವಾನಿತರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.
ಅಗಸ್ಟ್ 6 2023, ರವಿವಾರ
1.ಸಾರ್ವಜನಿಕರಿಗಾಗಿ ಉಡುಪಿ ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆ (ಫ್ಯಾಷನ್ ಶೋ, ಭಾರತದ ವಿವಿಧ ಸಾಂಪ್ರದಾಯಿಕ ಶೈಲಿಯಲ್ಲಿ ಮಾತ್ರ)
2. ಮುಂದಿನ ಒಂದು ವರ್ಷಗಳ ಅವಧಿಗೆ ಉಡುಪಿ ಸೀರೆಗಳಿಗೆ 20 ಬ್ರಾಂಡ್ ಅಂಬಾಸಿಡರ್ ಗಳ ಆಯ್ಕೆ.
3. ಕೈ ಮಗ್ಗದ ವಸ್ತ್ರ ಮತ್ತು ಉಡುಪಿ ಸೀರೆಗಳನ್ನು ಧರಿಸಿ ಆಗಮಿಸುವ ಗಣ್ಯದಂಪತಿಗಳನ್ನು ವೇದಿಕೆಯಲ್ಲಿ ಅಭಿನಂದಿಸುವುದು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ರಾಜ್ಯ ಸಚಿವೆ ಹಾಗೂ ಸಂಸದರಾದ ಸನ್ಮಾನ್ಯ ಶೋಭಾ ಕರಂದ್ಲಾಜೆ ರವರು ನೆರವೇರಿಸಲಿದ್ದಾರೆ
ಅಗಸ್ಟ್ 7 2023, ಸೋಮವಾರ
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಸಮಾರಂಭ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಎಂ ಎನ್ ರಾಜೇಂದ್ರಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ (ರಿ) ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಬಿ ಎಸ್ ಸೋಮಶೇಖರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಹಾಗೂ ಸರ್ಕಾರದ ವಿವಿಧ ಇಲಾಖೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಈ ಕೆಳಗಿನ ಸುಮಾರು 80 ಲಕ್ಷ ರೂಪಾಯಿಗಳ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.
25 ಮಹಿಳೆಯರು ವೃತ್ತಿಪರ ನೇಕಾರರಾಗಿ ಉಡುಪಿ ಸೀರೆಗಳ ಉತ್ಪಾದನಾ ಕ್ಷೇತ್ರಕ್ಕೆ ಪಾದಾರ್ಪಣೆ.
ಉಡುಪಿ ಮತ್ತು ದಕ ಜಿಲ್ಲೆಗಳ 8 ಸಹಕಾರಿ ಸಂಘಗಳ ತಲಾ ಒಬ್ಬ ಹಿರಿಯ ನೇಕಾರರಿಗೆ ನೇಕಾರ ಕೌಶಲ್ಯ ರತ್ನ ಪುರಸ್ಕಾರ.
ಅತ್ಯಾಕರ್ಷಕ ತರಬೇತಿ ವೇತನ ಪ್ರಯಾಣ ಭತ್ಯೆ ಮತ್ತು ಊಟೋಪಚಾರ ಸಹಿತ 50 ಆಕಾಂಕ್ಷಿಗಳಿಗೆ ಆರು ತಿಂಗಳ ಕೈಮಗ್ಗದ ತರಬೇತಿಯ ಎರಡು ಕಾರ್ಯಗಾರಗಳಿಗೆ ಚಾಲನೆ.
14 ಕೈಮಗ್ಗದ ನೇಕಾರರಿಗೆ ಕಾರ್ಯಗಾರ ಕೇಂದ್ರ ನಿರ್ಮಿಸಲು 1.2 ಲಕ್ಷ ರೂಗಳ ಸಹಾಯದನ ಹಸ್ತಾಂತರ.
27 ನೇಕಾರರಿಗೆ ತಲಾ 50,000 ರೂಪಾಯಿ ಮೌಲ್ಯದ ನೂತನ ಕೈಮಗ್ಗಗಳ ಹಸ್ತಾಂತರ.
ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಬ್ಯಾಂಕಿಂಗ್ ಸೇವೆಗೆ ಚಾಲನೆ.
ಐವರು ಪರಿಣಿತ ನೇಕಾರರಿಗೆ ಕೈಮಗ್ಗ ಸಲಕರಣೆಗಳ ಕೊಡುಗೆ.
ಐದು ಪರಿಣಿತ ಅನೇಕರಿಗೆ ಸೋಲಾರ್ ಲೈಟ್ ಗಳ ಹಸ್ತಾಂತರ.
ಸಮರ್ಥ್ ಯೋಜನೆಯಡಿಯಲ್ಲಿ 25 ನೇಕಾರರಿಗೆ 45 ದಿನಗಳ ಆಧುನಿಕ ನೇಯ್ಗೆ ಕೌಶಲ್ಯ ಕಾರ್ಯಾಗಾರಕ್ಕೆ ಚಾಲನೆ.
ವಿದ್ಯಾರ್ಥಿನಿಯರಿಗಾಗಿ ಉಡುಪಿ ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆ (ಫ್ಯಾಷನ್ ಶೋ, ಭಾರತದ ವಿವಿಧ ಸಾಂಪ್ರದಾಯಿಕ ಶೈಲಿಯಲ್ಲಿ ಮಾತ್ರ)
ಇದಲ್ಲದೆ ಕರ್ನಾಟಕದ ವಿವಿಧ ಭಾಗಗಳ ಕೈಮಗ್ಗದ ಸೀರೆ ಮತ್ತು ಇದರ ಉತ್ಪನ್ನಗಳ ಬಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಆಗಸ್ಟ್ 5 ರಿಂದ 7ನೇ ತಾರೀಕಿನ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಎಂದು ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ಇಂದ್ರಾಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








