ರಾಜಕೀಯ

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಆಯ್ಕೆ

Views: 73

ಕನ್ನಡ ಕರಾವಳಿ ಸುದ್ದಿ: ಕೇರಳದ ನೂತನ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪಕ್ಷದೊಳಗೆ ದೀರ್ಘ ಚರ್ಚೆ ನಡೆದಿದ್ದು, ವಿ.ಡಿ. ಸತೀಶನ್ ಹೆಸರು ಅಂತಿಮಗೊಂಡಿದೆ.

ಚುನಾವಣೆಯಲ್ಲಿ ಯುಡಿಎಫ್ ಬಹುಮತ ಪಡೆದ ತಕ್ಷಣವೇ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಪಕ್ಷದೊಳಗೆ ತೀವ್ರ ಚರ್ಚೆಗಳು ಆರಂಭವಾದವು. ದೆಹಲಿಯಿಂದ ತಿರುವನಂತಪುರದವರೆಗೆ ಹಲವಾರು ಸಭೆಗಳು, ಲಾಬಿ, ಮುಚ್ಚಿದ ಬಾಗಿಲಿನ ಮಾತುಕತೆಗಳು ನಡೆದವು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ.

ಈ ಮೊದಲು ಮುಖ್ಯಮಂತ್ರಿ ಪಟ್ಟಕ್ಕೆ ಮೂವರು ಪ್ರಮುಖ ಹೆಸರುಗಳು ಮುಂಚೂಣಿಯಲ್ಲಿದ್ದವು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರನ್ನು ಮುಖ್ಯ ಸ್ಪರ್ಧಿಗಳೆಂದು ಪರಿಗಣಿಸಲಾಗಿತ್ತು. ಇದೀಗ ಇವರಲ್ಲಿ ಸತೀಶನ್ ಅವರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿ ಪ್ರಕಟಿಸಿದೆ.

 

Related Articles

Back to top button
error: Content is protected !!