ಮೇ 20 ರೊಳಗೆ ನಾಯಕತ್ವ ಗೊಂದಲಕ್ಕೆ ಹೈಕಮಾಂಡ್ ತೆರೆ.. ಶೀಘ್ರವೇ ಡಿಕೆಶಿಗೆ ಸಿಹಿ ಸುದ್ದಿ ಸಿಗಲಿದೆಯೇ..!?
Views: 11
ಕನ್ನಡ ಕರಾವಳಿ ಸುದ್ದಿ : ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಕೊನೆಗೂ ಶುಭ ಘಳಿಗೆ ಹತ್ತಿರ ಬಂದಂತಿದೆ. ಮೇ 20 ರೊಳಗೆ ನಾಯಕತ್ವ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯೋ ಸಾಧ್ಯತೆ ಇದೆ ಅಂತಾ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಕೇರಳದಲ್ಲಿ ಸರ್ಕಾರ ರಚನೆ ಆದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿನ ನಾಯಕತ್ವ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಲಿದೆ.
ಇತ್ತ ಶಾಸಕ ಇಕ್ಬಾಲ್ ಹುಸೇನ್ ಇದು ನನ್ನ ಅಂತಿಮ ದಿನಾಂಕ ಮೇ 15ರೊಳಗೆ ಡಿಕೆಶಿಗೆ ಸಿಎಂ ಆಗ್ತಾರೆ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ. ಇನ್ನೊಂದೆಡೆ ರಾಜಣ್ಣ ಮಾತನಾಡಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತಾರೆ ಅವರು ಅಧಿಕಾರ ತ್ಯಾಗಕ್ಕೂ ಸಿದ್ಧರಿದ್ದಾರೆ ಅಧಿಕಾರ ಮುಂದುವರೆಯಲು ಸಿದ್ದ ಎಂದಿದ್ದಾರೆ.
ಸದ್ಯ ಡಿ.ಕೆ ಬ್ರದರ್ಸ್ ಇಬ್ಬರೂ ಹಲವು ಬಾರಿ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಿ ಬಂದಿದ್ದಾರೆ. ಸಿಡಬ್ಲ್ಯೂಸಿ ಸದಸ್ಯರನ್ನೂ ಭೇಟಿ ಮಾಡಿ ಬೆಂಬಲ ಗಿಟ್ಟಿಸಿ ಕೊಂಡಿದ್ದಾರೆ. ತಮ್ಮ ಶ್ರಮಕ್ಕೆ ಕೂಲಿ ಕೊಡಿ ಎಂದು ಹೈಕಮಾಂಡ್ ಮುಂದೆ ಸಂಯಮದಿಂದ ಕೇಳಿ ಕೊಂಡಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ, ಕೆ.ಸಿ ವೇಣುಗೋಪಾಲ್, ಸುರ್ಜೇವಾಲಾ ಮುಂದೆ ತಮ್ಮ ಲಾಯಲ್ಟಿ ಅಸ್ತ್ರವನ್ನ ಪ್ರಯೋಗಿಸಿದ್ದಾರೆ ಹೈಕಮಾಂಡ್ ಕೂಡ ಡಿ.ಕೆ ಶಿವಕುಮಾರ್ ಅವರ ಸಾಮರ್ಥ್ಯ, ಪಕ್ಷ ನಿಷ್ಠೆ ಎಲ್ಲವನ್ನೂ ಪರಿಗಣಿಸಿ, ಅವರಿಗೂ ಒಂದು ಅವಕಾಶ ನೀಡಲು ಮನಸ್ಸು ಮಾಡಿದ್ದಾರಂತೆ.
ಇನ್ನು ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಬಣದ ನಾಯಕರು ಎಷ್ಟೇ ಕೆಣಕಿದ್ರೂ ಸೈಲೆಂಟಾಗಿಯೇ ರಣತಂತ್ರ ರೂಪಿಸಿದ್ದಾರೆ. ಡಿಕೆಶಿಗೆ ಸಚಿವರು, ಶಾಸಕರ ಬೆಂಬಲ ಇಲ್ಲ ಅಂತಾ ಹೇಳಿದಾಗಲೂ, ನನ್ನ ಜೊತೆ ಹೈಕಮಾಂಡ್ ಇದೆ ಎನ್ನುವ ಮೂಲಕ ವರಿಷ್ಟರನ್ನೇ ನಂಬಿಕೊಂಡಿರೋದಾಗಿ ಹೇಳಿದ್ರು. ಈಗ ಇದೇ ಹೈಕಮಾಂಡ್ ಡಿಕೆ ಶಿವಕುಮಾರ್ ಅವ್ರನ್ನ ಸಿಎಂ ಗದ್ದುಗೆ ಮೇಲೆ ಕೂರಿಸಲು ಮುಂದಾಗಿದೆ ಅಂತಾ ಪಕ್ಷದ ಮೂಲಗಳು ಹೇಳ್ತಿವೆ.
ಹೆಚ್ಚುವರಿ ಡಿಸಿಎಂ, ಸಿದ್ದು ಆಪ್ತರಿಗೆ ಹೆಚ್ಚು ಸಚಿವಸ್ಥಾನ, ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಪಟ್ಟ, ಸಿಎಂ ಪುತ್ರ ಯತೀಂದ್ರಗೆ ಮಂತ್ರಿಗಿರಿ ಸೇರಿದಂತೆ ಸಿದ್ದರಾಮಯ್ಯ ಅಂಡ್ ಟೀಂನ ಯಾವುದೇ ಕಂಡೀಷನ್‌ಗೂ ತಾವು ರೆಡಿ ಅಂತಾ ಡಿ.ಕೆ ಶಿವಕುಮಾರ್ ವರಿಷ್ಟರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.. ಕನಸು ನನಸಾಗೋ ಸಮಯ ಬಂದಿದ್ದು, ಅಡ್ಡಿ ಆತಂಕಗಳೆಲ್ಲಾ ನಿವಾರಣೆ ಆಗಲು ಡಿಕೆ ಶಿವಕುಮಾರ್, ಶನಿವಾರ ಎರಡು ಪ್ರಮುಖ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ವಿಶೇಷ ಪೂಜೆ ಸಲ್ಲಿಸಿದ್ದಾರೆ.. ಪಾಂಡಿಚೇರಿಯಲ್ಲಿನ ತಿರುನಲ್ಲರ್ ನಲ್ಲಿರುವ ಶನೈಶ್ವರ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ನಂತರ ತಮಿಳುನಾಡಿನ ನೆರೂರ್ ನಲ್ಲಿರುವ, ಪವಾಡಗಳಿಗೆ ಹೆಸರುವಾಸಿಯಾಗಿರುವ ಸದಾಶಿವ ಬ್ರಹ್ಮೇಂದ್ರ ಜೀವ ಸಮಾಧಿಗೂ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ಬಂದಿದ್ದಾರೆ.
ನಾಯಕತ್ವ ಬದಲಾವಣೆ ಗೊಂದಲ ಇದೇ ತಿಂಗಳಲ್ಲಿ ಬಗೆಹರಿ ಯುತ್ತದೆ ಅಂತಾ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ರು. ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುತ್ತಾರಾ ಅಥವಾ ಬದಲಾಗುತ್ತಾರಾ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂದ್ರು. ಒಟ್ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಲಾಯಲ್ಟಿ ಅಸ್ತ್ರಕ್ಕೆ ಹೈಕಮಾಂಡ್ ಮಣಿದಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಸಿಗಲಿದೆ ಎನ್ನಲಾಗ್ತಿದ್ರು ಸಿದ್ದರಾಮಯ್ಯ ತಂತ್ರಗಾರಿಕೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.






