ಆರೋಗ್ಯ
ಮರವಂತೆ ಸಾಧನಾ ಸಮಾಜ ಸೇವಾ ವೇದಿಕೆ ಆಶ್ರಯದಲ್ಲಿ ಮೂಳೆ ಸಾಂದ್ರತೆ ಪರೀಕ್ಷೆ

Views: 1
ಕುಂದಾಪುರ:ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆಯ ಆಶ್ರಯದಲ್ಲಿ ಶನಿವಾರ ಸಾಧನಾ ಸಮುದಾಯ ಭವನದಲ್ಲಿ ನಡೆದ ಮೂಳೆ ಸಾಂದ್ರತೆ ತಪಾಸಣೆ ಕಾರ್ಯಕ್ರಮದಲ್ಲಿ 104 ಜನರ ಮೂಳೆ ಸಾಂದ್ರತೆ ಪರೀಕ್ಷೆ ನಡೆಸಿ, ಅಗತ್ಯ ಇರುವವರಿಗೆ ಉಚಿತ ಔಷಧಿ ನೀಡಲಾಯಿತು. ಬಯೊಟಿಕ್ಸ್ ಲೈಫ್ ಸಂಸ್ಥೆಯ ನೆರವಿನೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಡಾ. ರೂಪಶ್ರೀ, ಡಾ. ರತ್ನಾಕರ ಹೆಬ್ಬಾರ್, ಸಿರಿ ಮರವಂತೆ, ಸೋಮಯ್ಯ ಬಿಲ್ಲವ, ದೇವಿದಾಸ ಶ್ಯಾನುಭಾಗ್, ನಾಗೇಶ ರಾವ್, ಗುರುದಾಸ್ ಶ್ಯಾನುಭಾಗ್ ಸಹಕರಿಸಿದರು.