ಮೆದುಳು ಜ್ವರಕ್ಕೆ ನರ್ಸ್ ಸಾವು
Views: 20
ಕನ್ನಡ ಕರಾವಳಿ ಸುದ್ದಿ: ಮೆದುಳು ಜ್ವರದ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಲುಷಿತ ನೀರು ಅಥವಾ ಕೆರೆ ಕುಂಟೆಗಳಲ್ಲಿ ಸ್ನಾನ ಮಾಡುವಾಗ ಮೂಗಿನ ಮೂಲಕ ದೇಹ ಪ್ರವೇಶಿಸುವ ಈ ಅಮೀಬಾ ನೇರವಾಗಿ ಮೆದುಳಿನ ಮೇಲೆ ದಾಳಿ ಮಾಡುತ್ತದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಜನರಿಗೆ ಸೂಚಿಸಿದೆ.
ಮೃತಪಟ್ಟ ಯುವತಿಯನ್ನು ಕೇರಳದ ಆಲಪ್ಪುಯ ಜಿಲ್ಲೆಯ ಅಂಬಲಪ್ಪುಯ ವಡಕ್ಕೆ ನಿವಾಸಿ ಆರ್ಯಾ ಮೋಳ್ (26) ಎಂದು ಗುರುತಿಸಲಾಗಿದೆ.
ಆರ್ಯಾ ಮೋಳ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ವಿದೇಶದಲ್ಲಿ ಉತ್ತಮ ಕೆಲಸ ಸಿಕ್ಕಿದ ಕಾರಣ, ಅಗತ್ಯ ತಯಾರಿಗಳಿಗಾಗಿ ಎರಡು ತಿಂಗಳ ಹಿಂದೆ ಊರಿಗೆ ಮರಳಿದ್ದರು.
ಊರಿಗೆ ಬಂದ ಕೆಲವೇ ದಿನಗಳಲ್ಲಿ ಆರ್ಯಾ ಅವರಲ್ಲಿ ತೀವ್ರ ಜ್ವರ ಸೇರಿದಂತೆ ಮೆದುಳು ತಿನ್ನುವ ಅಮೀಬಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಯಿತಾದರೂ. ಮೆದುಳಿಗೆ ಹರಡಿದ್ದ ಸೋಂಕಿನ ತೀವ್ರತೆ ಹೆಚ್ಚಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.






