ಇಂದು ಮಧ್ಯಾಹ್ನ 12ಕ್ಕೆ SSLC ಫಲಿತಾಂಶ ಪ್ರಕಟ
Views: 13
ಕನ್ನಡ ಕರಾವಳಿ ಸುದ್ದಿ: ತೃತೀಯ ಭಾಷೆ ವಿವಾದದ ಮದ್ಯೆಯೇ ರಾಜ್ಯ ಸರಕಾರ ಯಾವುದೇ ವಿಳಂಬ ಅಥವಾ ಗೊಂದಲ ಇಲ್ಲದೆ ಗುರುವಾರವೇ SSLC ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದೆ.
ತೃತೀಯ ಭಾಷಾ ವಿಷಯಕ್ಕೆ ಗ್ರೇಡ್ ಬದಲು ಅಂಕವನ್ನೇ ನೀಡಲು ತೀರ್ಮಾನಿಸಿರುವ ರಾಜ್ಯ ಸರಕಾರ, ಗುರುವಾರ ಮಧ್ಯಾಹ್ನ 12 ಗಂಟೆಗೆ ಎಸೆಸೆಲ್ಸಿ ಫಲಿತಾಂಶ ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಈ ಮೊದಲು ಎ.24ಕ್ಕೆ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಲಾಗಿತ್ತು. ಈಗ ಒಂದು ದಿನ ಮುಂಚಿತವಾಗಿಯೇ ಪ್ರಕಟಿಸಲು ಶಿಕ್ಷಣ ಸಚಿವರು ನಿರ್ಧರಿಸಿದ್ದಾರೆ. ಅಲ್ಲದೆ, ಅವರು ಸುದ್ದಿಗೋಷ್ಠಿ ಮೂಲಕವೂ ಮಾಹಿತಿ ನೀಡಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಗುರುವಾರ ಮಧ್ಯಾಹ್ನ 12 ಗಂಟೆಗೆ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟ ಆಗಲಿದೆ ಎಂದು ತಿಳಿಸಿದ್ದಾರೆ.
ಫಲಿತಾಂಶ ವೀಕ್ಷಣೆ ಹೇಗೆ
ಗುರುವಾರ ಮಧ್ಯಾಹ್ನ 12 ಗಂಟೆ ನಂತರ 2026ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು https://karresults.nic.in/ ವೆಬ್ ಸೈಟ್, KarnatakaOne Mobile App ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಬಾರಿ ಪ್ರಥಮ ಬಾರಿಗೆ https://www.digilocker.gov.in/ವೆಬ್‌ಸೈಟ್ ಮೂಲಕ ಡಿಜಿಲಾಕರ್‌ನಲ್ಲಿ ಅಂಕಪಟ್ಟಿಯನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು.






