ಸಿಳ್ಳೆ ಹಾಕಿದ ಪ್ರೇಕ್ಷಕರಿಗೆ ಕ್ಲಾಸ್ ತೆಗೆದುಕೊಂಡ ಅಶೋಕ್ ಭಟ್ಟರಿಗೆ ಟಾಂಗ್ ಕೊಟ್ಟ ಹಾಸ್ಯ ಕಲಾವಿದ ಸೀತಾರಾಮ್ ಕುಮಾರ್
Views: 163
ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಸಮೀಪ ಹೆನ್ನಾಬೈಲ್ ನಲ್ಲಿ ಶ್ರೀ ಧರ್ಮಸ್ಥಳ ಮೇಳದವರಿಂದ ನಡೆದ ಹರಕೆ ಬಯಲಾಟದ ನಡುವೆಯೇ ಕೃಷ್ಣ ಪಾತ್ರಧಾರಿ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಭಾಗವತರು ಹಾಡಿದ ಪದ್ಯಕ್ಕೆ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ರಂಗಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡು ‘ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗೇನೆ, ಇದು ದೊಂಬರಾಟ ಅಲ್ಲ ಎಂದ ಘಟನೆ ಇದಕ್ಕೆ ಸಂಬಂಧಪಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಯಕ್ಷಗಾನದ ವಲಯದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ.
ಭಾಗವತರ ಪದಕ್ಕೆ ಪ್ರೇಕ್ಷಕರು ಶಿಳ್ಳೆ ಹೊಡೆದಾಗ ಕೃಷ್ಣ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ ಉಜಿರೆ ಅಶೋಕ್ ಭಟ್ ಕೋಪಗೊಂಡು ಏನು ಆಲೋಚನೆ ಮಾಡಿದ್ದೀರಿ.. ರೆಕಾರ್ಡ ಆಗಿದೆ ಅದು ಆಗದಿದ್ದರೆ ಬನ್ಸ್ ತಿಂದು ಹೋಗಿ.. ಏನು ಹೇಳುತ್ತೀರಿ ಹಿರಿಯರೇ.. ಯಾವುದನ್ನು ಬೆಳೆಸಬೇಕು ಎಂದು ಆಲೋಚನೆ ಮಾಡಿ ಹುಚ್ಚರನ್ನು ಬೆಳೆಸಬೇಡಿ ಕಲಾಪಕ್ಷಕರನ್ನು ಬೆಳೆಸಿ.. ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗೇನೆ, ದೊಂಬರಾಟ ಅಲ್ಲ ಇದು. ನನಗೆ ದಾಕ್ಷಿಣ್ಯ ಇಲ್ಲ, ಇದು ಯಕ್ಷಗಾನವೊ? ಕೋಳಿ ಕಟ್ಟವೋ? ಕಂಬಳವೋ ಎಂದು ಎಂದು ಪ್ರಸಂಗದ ಮಧ್ಯೆ ಪ್ರೇಕ್ಷಕರನ್ನು ಕೃಷ್ಣ ಪಾತ್ರಧಾರಿ ಅಶೋಕ್ ಭಟ್ ಉಜಿರೆ ತರಾಟೆಗೆ ತೆಗೆದು ಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆ ಆರಂಭವಾಗಿದೆ.

ಈ ನಡುವೆ ಯಕ್ಷಗಾನ ಪ್ರದರ್ಶನದಲ್ಲಿ ಅಶೋಕ್ ಭಟ್ಟರಿಗೆ ಟಾಂಗ್ ಕೊಟ್ಟ ಹಾಸ್ಯ ಕಲಾವಿದ ಸೀತಾರಾಮ್ ಕುಮಾರ್
ಚಪ್ಪಾಳೆಯನ್ನು ಎಷ್ಟು ಬೇಕಾದರೂ ಹಾಕಿ ನನ್ನ ಪ್ರವೇಶಕ್ಕೆ ಎಲ್ಲರೂ ಚಪ್ಪಾಳೆ ಹಾಕಿದ್ದಾರೆ ಎಷ್ಟು ಬೇಕಾದರೂ ಹಾಕಿ ಆಕ್ಷೇಪ ಮಾಡುವಂತಿಲ್ಲ ನನಗೆ ಬದುಕು ಕೊಟ್ಟಿದ್ದೆ ಚಪ್ಪಾಳೆ ಶಿಳ್ಳೆಯಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಹೀಗೆ ಇರುತ್ತೇನೆ ಎಂಬ ವಿಶ್ವಾಸ ಇದೆ ಎಂದು ರಂಗದಲ್ಲಿ ಹೇಳಿದರು.






